Sunday, June 8, 2025

ಪ್ರವಾಸಿ ಕಂಡ ವಿಜಯನಗರ


ಆಂಗ್ಲ ಅಧಿಕಾರಿ ಲೆಫ್ಟಿನೆಂಟ್ ಎಮಿಟ್ ನವೆಂಬರ್ ಮಾಹೆಯ ಕೊನೆಯಲ್ಲಿ ಈ ನಗರಕ್ಕೆ ಭೇಟಿ ನೀಡಿ ಇಲ್ಲಿನ ಅವಶೇಷಗಳನ್ನು ತನ್ನ ದಿನಚರಿಯಲ್ಲಿ ಮುಂದಿನಂತೆ ದಾಖಲಿಸಿದ್ದಾನೆ. “ಈ ನಗರವು ತುಂಭದ್ರ (Tombuddra) ನದಿಯ ದಕ್ಷಿಣ ದಂಡೆಯ ಮೇಲಿದ್ದು, ಆನೆಗೊಂದಿ (Annagondy) ಎದಿರು ದಿಕ್ಕಿನಲ್ಲಿದೆ. (ಆನೆಗೊಂದಿ) ತುಂಗಭದ್ರ ನದಿಯ ಉತ್ತರದ ದಡದಿಂದ ಎರಡು ಮೈಲಿ ದೂರದಲ್ಲಿದ್ದು, ಇದೇ ಹೆಸರಿನ ಜಿಲ್ಲೆಯೊಂದು (ನಗರ) ಇಂದು ಅಸ್ತಿತ್ವದಲ್ಲಿದೆ. ಇದು ಪ್ರಾಚೀನ ನಗರ ‘ಬಿಜನುಗ್ಗೂರು’ ಕಾಲದಲ್ಲಿ ಒಂದು ಜಹಾಗೀರ್ ಆಗಿತ್ತು. ಎರಡು ಶತಮಾನಗಳ ಹಿಂದೆ ಈ ಸಾಮ್ರಾಜ್ಯದ ಅಧೀನಕ್ಕೊಳಪಟ್ಟ ವಿಶಾಲ ಭೂ ಭಾಗವನ್ನು ಕೆನಾರ (Canahara) ಎಂದು ಕರೆಯಲಾಗುತ್ತಿತ್ತು”.

“ಕೊಮಲಾಪುರದ (Comalapura) ಆಗ್ನೇಯ ಭಾಗದ ಕೊಲವೆಯು ಅರ್ಧ ಮೈಲಿ ದೂರದವರೆಗೆ ಬೆಟ್ಟ ಮತ್ತು ದೇವಾಲಯಗಳಿಂದ ಸುತ್ತುವರೆದಿದೆ. ಅತ್ಯಂತ ಸುಂದರವಾಗಿರುವ ಈ ಪ್ರದೇಶವು ಪೂರ್ವ ಭಾಗದಲ್ಲಿ ಬಲವಾದ ಕಲ್ಲಿನ ಕೊಲವೆಯಿಂದ ಮತ್ತು ಪಶ್ಚಿಮ ಭಾಗದಲ್ಲಿ ನದಿಯು ಎಲ್ಲೆಯಾಗಿ ಸುತ್ತುವರೆದಿದೆ. ಎಂಟು ಮೈಲಿಯಷ್ಟು ಸುತ್ತಳತೆಯಿರುವ ಈ ಪ್ರದೇಶವನ್ನು ಕುರಿತು ನಾನು ಬಹಳವಾಗಿ ಕೇಳಿದ್ದೇನೆ. ಇದರ ಮಧ್ಯಭಾಗವು ಎತ್ತರವಾದ ಹಲವು ಬೆಟ್ಟಗಳಿಂದ ಹಾಗೂ ದೇವಾಲಯಗಳಿಂದ ಸುತ್ತುವರೆದಿದೆ. ಇಲ್ಲಿ ೩೦ರಿಂದ ೪೫  ಯಾರ್ಡ್ನಷ್ಟು ವಿಶಾಲವಾಗಿರುವ ಹಲವು ರಸ್ತೆಗಳನ್ನು ನಾನು ಕಂಡಿದ್ದೇನೆ. ಇಂದು ಇಲ್ಲಿ ಕೆಲವರು ಉತ್ತಮವಾದ ಭತ್ತವನ್ನು ಬೆಳೆಯುತ್ತಾರೆ.” ಹೀಗೆ ಒಂದು ರಸ್ತೆಯ ಅವಶೇಷವನ್ನು ಸಹ ಈತನು ತನ್ನ ದಿನಚರಿಯಲ್ಲಿ ದಾಖಲಿಸಿದ್ದಾನೆ. “ನೈರುತ್ಯ ಮೂಲೆಯಲ್ಲಿರುವ ರಸ್ತೆಯು ಈಶಾನ್ಯ ಭಾಗದೆಡೆಗೆ ಸುಮಾರು ಅರ್ಧ ಮೈಲಿ ದೂರದವರೆಗೂ ಸಾಗಿದೆ. ಇದು ೩೫ ಯಾರ್ಡ್ನಷ್ಟು ಅಗಲವಾಗಿದೆ. ಇದರ ಎರಡೂ ಬದಿಯಲ್ಲಿ ಕಂಬಗಳ ಸಾಲಿವೆ. ಅಲ್ಲದೆ ನೈರುತ್ಯ ಮೂಲೆಯ ಕೊನೆಯ ಭಾಗದಲ್ಲಿ ವಿಶಾಲವಾದ ಮತ್ತು ಬೃಹತ್ ದೇವಾಲಯ ಇತ್ತು” ಎಂದು ದಾಖಲಿಸಿದ್ದಾನೆ (ಇದು ಈಗಿನ ವಿರೂಪಾಕ್ಷ ದೇವಾಲಯ). “ಈ ರಸ್ತೆಯ ಪಶ್ಚಿಮ ಭಾಗದಲ್ಲಿ (ತುಂಗಭದ್ರಾ ನದಿಯ ದಡದಲ್ಲಿ) ಮಾವಿನ ಹಣ್ಣಿನ ತೋಟವಿದೆ. ಇಲ್ಲಿ ಹಲವು ತೊರೆಗಳು (Strearns) ಇವೆ. ಅಲ್ಲದೆ ಇಲ್ಲಿ ಕಾಲುವೆಯ ಭಗ್ನಾವಶೇಷಗಳು ಹರಡಿವೆ. ಈ ಪ್ರದೇಶದ ಹೆಸರೇನೆಂದು ನಾನು ಸ್ಥಳೀಯರನ್ನು ವಿಚಾರಿಸಿದಾಗ ಇದು ಆಳು ಪಟ್ಟಣ (Allputna) ಎಂಬುದಾಗಿ ತಿಳಿಸಿದರು. ನದಿಯ ಒಂದು ಭಾಗದಲ್ಲಿ ೧೬ ಯಾರ್ಡ್ ಅಗಲದ ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಅದರ ಅವಶೇಷಗಳು ನದಿಯೊಡನೆ ಬೆರತುಹೋಗಿವೆ” ಎಂದೂ ಸಹ ಆತ ವಿವರವಾಗಿ ದಾಖಲಿಸಿದ್ದಾನೆ.

“ಕಮಲಾಪುರ (Comalapour)ವು ಬೆಟ್ಟಗಳಿಂದ ಸುತ್ತುವರೆದಿದೆ. ಕಮಲಾಪುರದಿಂದ ರಸ್ತೆಯು ಎತ್ತರವಾದ ಬೆಟ್ಟಗಳ ಮಧ್ಯೆ ಕೆಲವು ಕಡೆ ಏರುತ್ತಾ ಇನ್ನು ಕೆಲವು ಕಡೆ ಇಳಿಯುತ್ತಾ ದೊಡ್ಡ ಕಲ್ಲುಗಳ ಸಮೀಪದಲ್ಲಿಯೇ ಹಾದು ಹೋಗುತ್ತದೆ. ಹೀಗೆ ೮೧/೨ ಮೈಲಿ ದೂರದವರೆಗೆ ರಸ್ತೆ ಇದೆ. ೮ ಅಡಿಗಿಂತಲೂ ಹೆಚ್ಚು ಅಗಲವಿಲ್ಲದ ಈ ರಸ್ತೆಯು ಅತಿ ಎತ್ತರವಾಗಿರುವ ಬೆಟ್ಟಗಳವರೆಗೆ ಮುಂದುವರೆಯುತ್ತದೆ. ಈ ರಸ್ತೆಯನ್ನು ಕಲ್ಲು ಹಾಸಿನಿಂದ ನಿರ್ಮಾಣ ಮಾಡಲಾಗಿದೆ. ಇಲ್ಲಿ ಕಲ್ಲಿನ ಪ್ರವೇಶ ದ್ವಾರಗಳು (Gateways) ಮತ್ತು ಕಾವಲುಗಾರರ ಮನೆಗಳಿದ್ದು ಅವು ಬೆಟ್ಟದ ಮೇಲಿನ ಭಾಗದಲ್ಲಿವೆ (ರಸ್ತೆಯ ಪೂರ್ವಭಾಗಕ್ಕೆ) ನೇರವಾದ ರಸ್ತೆಯ ನಂತರ (Country Opens & C’ ಗಳಿವೆ)” ಎಂದು ವಿವರಿಸಿದ್ದಾನೆ.

ನನ್ನ ಸ್ನೇಹಿತ ಕ್ಯಾಪ್ಟನ್ ಕ್ರಿಕ್ ಪ್ಯಾಟ್ರಿಕ್ನು ಪರ್ಷಿಯನ್ ಭಾಷೆಯಲ್ಲಿ ರಚಿಸಿರುವಂತೆ “ಹಾಳುಪಟ್ಟಣ ಮತ್ತು ಬಿಜುನಗರ ಎರಡೂ ಒಂದೇ. ಆದರೆ ಇದನ್ನು ಅಲ್ಲಿಯ ಜನರು ಮೂಲ ಹೆಸರಿನಿಂದ ಕರೆಯುತ್ತಿಲ್ಲ. ಕ್ಯಾಪ್ಟನ್ ಬಿಟ್ಸನ್ ಎನ್ನುವವನು ಎಮಿಟ್ನಿಗಿಂತಲೂ ಅವನು ಸಹಾ ದಾಖಲಿಸಿದ್ದಾನೆ. ಎಮಿಟ್ನು ನೋಡಿದ ಕ್ರಮವೂ ಸರಿಯಾಗಿದ್ದು ತದನಂತರ ಬಿಜಯನಗರದ ಅವಶೇಷಗಳು ಹೆಚ್ಚು ಹಾಳಾಗಿವೆ” ಎಂದು ಆತ ವಿವರಿಸಿದ್ದಾನೆ. ಜಿಲ್ಲೆಯ ಕೇಂದ್ರದಲ್ಲಿರುವ ಆನೆಗೊಂದಿಯನ್ನು ದಖ್ಖನ್ನೊಡನೆ ನೋಡಿರುವುದು ಲೇಖಕನ ಹಿಡಿತಕ್ಕೆ ಸಾಕ್ಷಿಯಾಗಿದೆ (ನೋಡಿ, ರಿವ್ಯೆ ಆಫ್ ದ ಡೆಕ್ಕನ್, ಪು. ೧೪). “ಕ್ರಿ.ಶ. ೧೫೬೫ರಲ್ಲಿ ಬಿಜನಗರಕ್ಕೆ ಭೇಟಿ ನೀಡಿದ ಸೀಸರ್ ಫೆಡ್ರಿಕ್ನು ೨೪ ಮೈಲಿಗಳ ವಿಸ್ತಾರವಾದ ಈ ನಗರದಲ್ಲಿ ಹಲವು ದೇವಾಲಯಗಳು ಬೆಟ್ಟಗಳು ಇವೆ” ಎಂದು ದಾಖಲಿಸಿದ್ದಾನೆ. ಎಮಿಟ್ನು ಸಹ ಪ್ರಾಚೀನವಾದ ಈ ನಗರವು Boundaryಯಿಂದ ಸುತ್ತುವರಿದಿದೆ. ಕಲ್ಲುಹಾಸಿನ ರಸ್ತೆಗಳು ಕಮಲಾಪುರದವರೆಗೆ ಮುಂದುವರಿದಿದ್ದು, ಅದು ನಗರದ ಎಲ್ಲೆಯವರೆಗೆ ಮುಂದುವರಿದಿದೆ. ಹೀಗೆ ಹಾದು ಹೋಗುವಾಗ ಹಲವು ದ್ವಾರಗಳಿದ್ದು, ಅವುಗಳಲ್ಲಿ ಒಂದು ದ್ವಾರ ಇಡೀ ನಗರಕ್ಕೆ ಪ್ರಮುಖವಾಗಿತ್ತು ಎಂದು ಈತನು ದಾಖಲಿಸಿದ್ದಾನೆ. ಟಿಪ್ಪುವಿನಿಂದ ಹಿಂದುರುಗಿ ಸಲ್ಪಟ್ಟ ಆನೆಗೊಂದಿ ಸರ್ಕಾರವನ್ನು (Circar of Annagondy) ನಾನು ಮನಸ್ಸಿನಲ್ಲಿ ಊಹಿಸಿದ್ದೇನೆ. ಟಿಪ್ಪುವಿನ ಅಧೀನದಲ್ಲಿದ್ದ ಈ ಪ್ರದೇಶ ದೋ ಆಬ್ ಪ್ರದೇಶದಲ್ಲಿದ್ದು, ನಿಜಾಮರು ಮರಾಠರಿಂದ ಪಡೆದುಕೊಂಡಿದ್ದು ಅದಕ್ಕೊ ಪೂರ್ವದಲ್ಲಿ ಆನೆಗೊಂದಿಯ ಬಿಜನಗರದ ರಾಜರ ಮೂಲ ಸಂತತಿಯ ನೆಲೆಯಾಗಿತ್ತು. ಅಷ್ಟೇ ಅಲ್ಲದೆ ಮುಂದೆ ಆ ಸಾಮ್ರಾಜ್ಯಕ್ಕೂ ಈ ಪ್ರದೇಶ ಸೇರಿಸಲ್ಪಟ್ಟಿತ್ತು. ಇಲ್ಲಿ ಪ್ರಾಚೀನ ರಾಜಧಾನಿಯ ಹಲವು ಅವಶೇಷಗಳಿವೆ. ಟಿಪ್ಪು ತನ್ನ ಪ್ರತಿಷ್ಠೆಗಾಗಿ ಈ ಪ್ರದೇಶವನ್ನು ಆ ಕಾಲದಲ್ಲಿ ಹಿಡಿದು ಕೊಂಡನು. ಈ ಕುರಿತು ನಾನು ಹೆಚ್ಚಿನ ವಿವರಣೆ ನೀಡಿದ್ದೇನೆ. ನಾನು ಇಲ್ಲಿನ ರಹದಾರಿ ಮೊದಲಾದ ವಿವರಗಳನ್ನು ‘ವೀವ್ ಆಫ್ ದಿ ಡೆಕ್ಕನ್’ ಎಂಬ ಗ್ರಂಥದಲ್ಲಿ ಯಥಾವತ್ತಾಗಿ ದಾಖಲಿಸಿ ಅದನ್ನು ಕ್ರಿ.ಶ. ೧೭೯೧ರಲ್ಲಿ ಪ್ರಕಟಿಸಿದ್ದೇನೆ. ಇದರಲ್ಲಿ ಹಲವು ಘಟನೆಗಳನ್ನು ಮತ್ತು ಯುದ್ಧದ ನಂತರ ವಿವರವನ್ನು ನೀಡಲಾಗಿದೆ.
ಆನೆಗೊಂದಿಯಲ್ಲಿ ನಡೆದ ಪ್ರಮುಖ ರಾಜಕೀಯ ಘಟನೆಗಳು ಮತ್ತು ಟಿಪ್ಪುವಿನ ಹಿಡಿತಕ್ಕೆ ಈ ಪ್ರದೇಶ ಒಳಪಟ್ಟ ರೀತಿಯನ್ನು ವಿವರಿಸಲಾಗಿದೆ. ಈ ಪ್ರಾಂತ್ಯ ಇಪ್ಪತ್ತು ಮೈಲಿಗಳವರೆಗೆ ವಿಸ್ತರಿಸಿದ್ದು ಬಿಜನಗರಕ್ಕೆ ಹೊಂದಿಕೊಂಡಂತೆ ಸುತ್ತುವರಿದಿದೆ. ಹಿಂದೆ ಇದೇ ಹೆಸರಿನ ಹಿಂದೂ ಸ್ರಾಮಾಜ್ಯಕ್ಕೆ ಸೇರಿತ್ತು. ದಕ್ಷಿಣದ ಎಲ್ಲಾ ರಾಜ್ಯಗಳು ರಾಮರಾಜೆ (ರಾಮರಾಯ)ನ ಪೂರ್ವಜರಾದ ಕೃಷ್ಣ (ಕೃಷ್ಣದೇವರಾಯ) ಎಂಬ ರಾಜನ ಅಧೀನಕ್ಕೊಳ ಪಟ್ಟಿದ್ದವು. ಕೆನರಾ ಮತ್ತು ಮಲಬಾರ್ ರಾಷ್ಟ್ರಗಳು ಇಂದಿಗೆ ೭೦೦ ವರ್ಷಗಳ ಹಿಂದೆ ಈ ದೊರೆಯ ಅಧೀನಕ್ಕೊಳಪಟ್ಟಿದ್ದವು. ಹಿಂದೂಸ್ಥಾನದ ಉದಯಪುರದಲ್ಲಿ ಈತ ತನ್ನ ಪ್ರತಿನಿಧಿಯನ್ನು ನೇಮಿಸಿ ಆಳ್ವಿಕೆ ಮಾಡುತ್ತಿದ್ದುದು ಈತನ ಘನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ‘ಮಹಾರಾಜ’ ಅಥವಾ ‘ರಾಜ’ ಎಂದು ಸಂಬೋಧಿಸಲಾಗುತ್ತಿದ್ದ ಈತನನ್ನು ದಖ್ಖನ್ನಲ್ಲಿ ಸಾಮಾನ್ಯವಾಗಿ ರಾಯಲ್ (Royeel) ಎಂದು ಸಂಬೋಧಿಸಲಾಗುತ್ತಿತ್ತು. ಈ ಪ್ರದೇಶದಲ್ಲಿ ಅಂದು ಕ್ರಾಂತಿಕಾರಕ ಸುಧಾರಣೆಗಳನ್ನು ಕೈಗೊಳ್ಳಲಾಗಿತ್ತು. ಅಲ್ಲದೆ ಈ ಪ್ರಾಂತ್ಯಕ್ಕೆ ಎರಡೂವರೆ ಲಕ್ಷ ರೂಪಾಯಿ ಆದಾಯ ಪ್ರಾಪ್ತವಾಗುತ್ತಿತ್ತು. ಇದು ಆನೆಗೊಂದಿಯ ನಾಣ್ಯಶಾಲೆಗೆ ಸೇರ್ಪಡೆಗೊಳ್ಳುತ್ತಿತ್ತು. ಇದು ಹೈದರ್ ಮತ್ತು ಆತನ ಪೂರ್ವಜರನ್ನು ಆಕರ್ಷಿಸಿತು. ಅಲ್ಲದೆ ಇಲ್ಲಿ ಅವರು ಸ್ವತಂತ್ರ್ಯವಾಗಿ ತಲೆ ಎತ್ತಲು ಪ್ರೇರಣೆ ನೀಡಿತು. ಮೊಗಲರು ಮತ್ತು  ಅವರ ಪ್ರತಿನಿಧಿಗಳು ಹಾಗೂ ಮರಾಠರ ಹಗೆತನಗಳಿಂದಾಗಿ ಈ ಸಾಮ್ರಾಜ್ಯ (ಸರ್ಕಾರ) ಅವನತಿ ಹೊಂದಿತು”.

ಬ್ಯಾಡ! ಬ್ಯಾಡ!

(ಪಡಸಾಲೆಯಲ್ಲಿ ಗೌಡ್ತಿ ಕೈಮೇಲೆ ತಲೆಯೂರಿ ಚಿಂತಾಮಗ್ನಳಾಗಿ ಕುಳಿತಿದ್ದಾಳೆ. ದುರ್ಗಿ ಸಹಾನುಭೂತಿಯಿಂದ, ಹೇಗೆ ಸಮಾಧಾನ ಮಾಡಬೇಕೆಂದು ತಿಳಿಯದೆ ಕುಳಿತಿದ್ದಾಳೆ. ಚಂಪಿ ತನ್ನ ರೂಮಿನಲ್ಲಿ ಕಿಡಕಿಯಲ್ಲಿ ಏನನ್ನೋ ತದೇಕ ಧ್ಯಾನದಿಂದ ಚಿಂತಿಸುತ್ತ ನಿಂತಿದ್ದಾಳೆ.)
ದುರ್ಗಿ  : ಸಮಾಧಾನ ತಗೊಳ್ಳೆವ್ವಾ, ಮಾತಾಡಿ ಮನಸ ಹುಣ್ಣ ಮಾಡಿದರ ಏನ ಬಂತು? ಈಗೇನ ಅಂಥಾಗ್ದಾಗೇತಿ?
ಗೌಡ್ತಿ  : ನಿನ್ನಿ ರಾತ್ರಿ ನೀನs ಕೇಳಲಿಲ್ಲೇನ? ಇನ್ನೂ ಏನ ಆಗೋದ ಬಾಕೀ ಐತಿ?
ದುರ್ಗಿ  : ಆಗೋದ ಆಗೇತಿ, ಇನ್ಹೆಂಗ ಸುಧಾರಿಸಬೇಕಂತ ನೋಡ್ರಿ. ಹಿಂಗಾತಲ್ಲ ಅಂತ ಕುಂತರ ಎದಕ್ಕ ಬಂತು?
ಗೌಡ್ತಿ  : ಅಕ್ಕಾ ತಂಗೇರಾಗಿ, ಒಂದ ಹೊಟ್ಟೇಲೆ ಹುಟ್ಟಿದವರಾಗಿ ಹಿಂಗ ಮಾಡೋದು ಉಂಟೇನ?
ದುರ್ಗಿ : ವಯಸ್ಸಿಗಿ ಬಂದಾರೆವ್ವಾ, ಏನೋ…….
ಗೌಡ್ತಿ : ನನ್ನ ಮಕ್ಕಳ ವಯಸ್ಸ ನನಗ್ಗೊತ್ತಿಲ್ಲೇನ?
ದುರ್ಗಿ : ಗೊತ್ತಿದ್ದರ ಶೀಲಕ್ಕನ ಮದಿವೀದೂ ಹೆಂಗರೆ ಗಟ್ಟಿ ಮಾಡಿಬಿಡ್ರಿ….
ಗೌಡ್ತಿ : ಹಾಂಗಂತ ಹಾದಿ ಬೀದೀಲೆ ಹೋಗವರಿಗೆ ಕಟ್ಟಾಕ ಆಗತೈತೇನ? ನೋಡಿದಿಲ್ಲೊ – ಬಡವ ಅಂತ ಪಾರೋತಿನ ಕೊಟ್ಟರ ಮನ್ಯಾಗ ಹೆಂಗ್ಹೆಂಗ ಹಾರ್ಯಾಡತಾನ! ಸಲಿಗೀ ನಾಯೀ ತಲೀಗೇರಿಸಿಕೊಂಡ್ಹಾಂಗ ಆಗೇತಿ!
ದುರ್ಗಿ : ಆಗೋದ ಆಗಿ ಹೋಯ್ತಲ್ಲವಾ, ಗ್ವಾಡೀ ತೊಳದಷ್ಟೂ ರಾಡಿ ಬರತೈತಿ, ಸುಮ್ಮನ ಅದನ್ಯಾಕ ಅಡಿ ಕೆಡತೀರಿ?
(ಅಷ್ಟರಲ್ಲಿ ಪಾರೋತಿ ಹುಲಿಗೊಂಡನನ್ನು ಕರೆದುಕೊಂಡು ಬರುವಳು. ಗೌಡ್ತಿ ಬಿಗುಮಾನದಿಂದಲೇ ಮಾತಾಡುವಳು. ಚಂಪಿ ತನ್ನ ರೂಮಿನಲ್ಲಿ ಯಾರಿಗೂ ಕಾಣದಂತೆ ನಿಂತು ಇವರ ಮಾತು ಕೇಳಿಸಿಕೊಳ್ಳುವಳು.)
ಗೌಡ್ತಿ : ಹುಲಿಗೊಂಡಾ, ಇಂದs ಬೀಗರ ಊರಿಗಿ ಹೋಗು. ಅದೇನೋ ಇಪ್ಪತ್ತೈದ ಸಾವಿರ ವರದಕ್ಷಿಣೆ ಕೊಡಬೇಕಂತಿದ್ದರಲ್ಲ, – ಎಷ್ಟ ಆಗತೈತೋ ಅಷ್ಟ ಕಡಿಮೆ ಮಾಡಾಕ ಖಟಪಟಿ ಮಾಡು. ಅಷ್ಟ ಬೇಕs ಬೇಕಂತ ಅವರೇನಾದರೂ ಹಟ ಹಿಡಿದರ, ಹೋಗಲಿ ಅಷ್ಟಕ್ಕs ಒಪ್ಪಿಕೊಂಡ ಬಾ.
ಹುಲಿಗೊಂಡ : ಕುದರೀ ನಾಲ ಬಡಸಾಕ ನಾ ಇಂದ ಗೋಕಾವಿಗಿ ಹೊಂಟೇನಿ.
ಪಾರೋತಿ : ಕುದರೀ ನಾಲ ನಾಳಿ ಬಡಸಾಕ ಆಗಾಣಿಲ್ಲಾ?
ಹುಲಿಗೊಂಡ : ಇಲ್ಲ,
ಗೌಡ್ತಿ : ಮನೀ ಅಳಿಯಾ ಆಗಿ ನೀ ಹಿಂಗ ಮಾಡಿದರ ಹೆಂಗೋ ತಮ್ಮ? ಕುದರೀ ನಾಲ ದೊಡ್ಡದೊ? ಮದಿವೀ ವ್ಯವಹಾರ ದೊಡ್ಡದೊ? ನಾಲ ಬಡಿಯುವವರು ನಾಳಿಗೆಂದರ ಎಲ್ಲಿ ಓಡಿ ಹೋಗತಾರೇನು? ಹುಚ್ಚರ‍್ಹಾಂಗ ಆಡಬ್ಯಾಡ. ಇಂದs ಹೋಗಿ ಬಾ.
ಹುಲಿಗೊಂಡ  : ನನಗ ಮದಿವೀ ವ್ಯವಹಾರ ತಿಳಿಯಾಣಿಲ್ಲ.
ಗೌಡ್ತಿ : ಜೋಡಿ ಯಾರನ್ನಾದರೂ ಕರಕೊಂಡ ಹೋಗು.
ಹುಲಿಗೊಂಡ : ಆ ಜೋಡಿದಾರ‍್ನs ಕಳಸರಿ.
ಪಾರೋತಿ : ಹೋಗಲಿ, ಬೀಗರ‍್ನs ಇಲ್ಲಿಗೆ ಕರಕೊಂಡಾದರೂ ಬಾ.
ಹುಲಿಗೊಂಡ : ಅದಕ್ಕ ನಾನs ಆಗಬೇಕಂತೇನು?
ಪಾರೋತಿ : ಸುತ್ತಿ ಸುತ್ತಿ ಯಾಕ ಮಾತಾಡ್ತಿ? ನನ್ನಿಂದ ಆಗೋದಿಲ್ವಾ – ಅನ್ನು, ಚಂಪೀನ ಮದಿವೀ ಮಾಡಿಕೊಡಾಕ ಮನಸ್ಸ ಹೆಂಗ ಬಂದೀತ ಹೇಳು; ದಿನಾ ತೆಕ್ಕಿ ತುಂಬ ಸುಖ ಕೊಡತಾಳ!
ಗೌಡ್ತಿ : ಪಾರೋತಿ ನೀ ಸುಮ್ಮಕಿರು. ಹುಲಿಗೊಂಡಾ, ಮನೀ ವ್ಯವಹಾರ ಅಂದಮ್ಯಾಲ ಮನಿಯವರು ಮಾಡಬೇಕೋ ಹೊರಗಿನವರು ಮಾಡಬೇಕೊ?
ಹುಲಿಗೊಂಡ  : ನಾ ಈ ಮನೆಯವನಲ್ಲ.
(ಸರ‍್ರನೆ ಹೋಗುವನು. ಗೌಡ್ತಿ ಬೆರಗು ಕೋಪದಿಂದ ಕೂರುವಳು. ಪಾರೋತಿ ಉಳಿದವರ ಆಶ್ಚರ್ಯ ಗಮನಿಸದೆ ಮಾತಾಡತೊಡಗುವಳು.)
ಪಾರತೋತಿ : ನೋಡ, ಹೆಂಗಿದ್ದ ನಾಡ ಬಡವ! ಒಂದು ಪವಾಸ ಎರಡುಪವಾಸ ಸಾಯತಿದ್ದ. ಏನೋ ನಾನs ದೊಡ್ಡ ಮನಸ್ಸ ಮಾಡಿ ಗೌಡಿಕೀ ಬಿರದ ಕೊಟ್ಟ ಮದಿವ್ಯಾದರ ತಲೀಮ್ಯಾಲ ಮೆಣಸ ಅರೀತೇನಂತಾನ! ಬೇಡಿ ಬಂದಿರಬೇಕ ಬಾ. ಬರಿಗೈಲೆ ಬಂದವನ ಕೈಯಾಗ ಆಸ್ತಿಪಾಸ್ತಿ ಕೊಟ್ಟರ ಉಣ್ಣಾಕ ಬರಬೇಕಲ್ಲ! ಯಾಕ? ಹಣ್ಯಾಗ ಬರದಿಲ್ಲ ನೋಡು.
(ಪಾರೋತಿ ಮಾತಾಡುತ್ತಿರುವಂತೆಯೇ ಹೊರಗೆ ಜನರ ಗಲಾಟೆ, – “ಎಳಕೊಂಬರ‍್ಯೋ ಬಿದ್ದಾಡೀನ” “ಓಡಿಬಂದಾಳ ಮತ್ತ” “ಬಿಡಬ್ಯಾಡ ಆ ರಂಡೀನ” ಮುಂತಾದ ಮಾತುಗಳು ಕೇಳಿಬರುತ್ತವೆ. ಪಾರೋತಿ ಮಧ್ಯೆ ತನ್ನ ಮಾತು ನಿಲ್ಲಿಸಬೇಕಾಗಿ ಬಂದುದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತ ತನ್ನ ರೂಮಿಗೆ ಹೋಗಿ ಬಿದ್ದುಕೊಳ್ಳುವಳು. ದುರ್ಗಿ ಗೌಡ್ತಿಯ ಮನದಿಂಗಿತ ತಿಳಿದುಕೊಂಡು ಅವಳಿಗೆ ಪರದೆ ಅಡ್ಡಗಟ್ಟಿ ಹೊರಗೆ ಹೋಗುವಳು. ರಾಯಪ್ಪ ಮತ್ತು ಅವನ ಮಿತ್ರರು ಕೊಮಾಲಿಯನ್ನು ಎಳೆದು ತರುವಳು. ಚಂಪಿ ಈಗ ತನ್ನ ಹಾಸಿಗೆಯ ಮೇಲೆ ಆಯಾಸದಿಂದ ಒರಗುವಳು.)
ರಾಯಪ್ಪ  : ಎವ್ವಾ ಗೌಡ್ತಿ, ಶರಣ್ರಿ, ನಾ ರಾಯಪ್ಪ.
ಗೌಡ್ತಿ : ಮತ್ತೇನಪಾ? ಇನ್ನs ಬಾಳುವೇಕ ಹತ್ತಲಿಲ್ಲs ಇವಳು?
ರಾಯಪ್ಪ : ಬಾಳ್ವೆ ಮಾಡೋ ಹೆಂಗಸೇನ್ರಿ ಎವ್ವಾ ಇದು? ಈ ಹೆಂತಿನೂ ಸಾಕು, ಈ ಊರ ಬೀಗತನಾನೂ ಸಾಕು. ಸ್ವಂತ ಹಡದವ್ವಂತ ತಿಳಕೊಂಡ ಹೇಳ್ತೀನ್ರೆವ್ವಾ, – ನೀವು ಹೇಳಿ ಕಳಿಸಿದ ಮ್ಯಾಲ ಒಂದಿಷ್ಟು ದಿನ ದುಡಕೊಂಡ ಇದ್ಧಾಂಗ ಮಾಡಿದ್ಲು. ಹಾದಿಗಿ ಬಂದಳಂತ ನಾನೂ ಮೈಮರತೆ. ಇದ್ದಕ್ಕಿದ್ದಾಂಗ ಒಂದು ದಿನ ಹರೀವತ್ತ ನೋಡತೀನಿ, ’ಮನೀ’ ಎಲ್ಲಾ ಬಳಕೊಂಡ, ಯಾರನ್ನೋ ಕಟಕೊಂಡ ಪರ್ಯಾರಿ ಆಗ್ಯಾಳ! ಈಕೀನ ಪತ್ತೇ ಮಾಡಾಕ, ಖರೇ ಹೇಳ್ತೇನ್ರೆವ್ವಾ, ಜೋಡ ಕಾಲ್ಮರಿ ಸವದ ಹೋದುವು. ಮೊನ್ನಿ ನಿಮ್ಮ ಊರಿಗಿ ಬಂದಾಳಂತ ಸುದ್ದಿ ಗೊತ್ತಾಗಿ ಬಂದವು. ಬಂದ ನೋಡಿದರ ಆಗಲೇ ಬಸರೂ ಆಗ್ಯಾಳ!
ಗೌಡ್ತಿ : ಬಸರ!
ರಾಯಪ್ಪ  : ಆಕೀನs ಕೇಳ್ರಿ ಎವ್ವಾ. ಈಗ ನೀವs ನನ್ನ ಮಾನ ಕಾಪಾಡಬೇಕ್ರಿ ತಾಯೀ.
ಗೌಡ್ತಿ : ವಿಚಾರ ಮಾಡೋಣು, ತುಸು ತಡೀಯಪ.
ರಾಯಪ್ಪ : ಏನ ವಿಚಾರ ಬ್ಯಾಡ, ಗಿಚಾರ ಬ್ಯಾಡ, – ನನ್ನ ಮನ್ಯಾಗಿನ ದಾಗೀನ ತಂದಾಳ ಅವನ್ನಷ್ಟ ಕೊಡಸರಿ; ಸೋಡ ಪತ್ರ ಮಾಡಿಸಿ ಬಿಡರೆವ್ವ, ಅಷ್ಟs ಸಾಕು.
ಗೌಡ್ತಿ : ನಿನ್ನ ಗಂಡ ಹೇಳಿದ್ದ ಖರೇ ಏನs ಕೊಮಾಲಿ?
ಕೊಮಾಲಿ : ಹೌಂದು.
ಗೌಡ್ತಿ : ಬಸರಾದದ್ದು ಖರೇ ಏನ?
ಕೊಮಾಲಿ : ಹೌದು.
ಗೌಡ್ತಿ : ಗಂಡನಿಗೊ? ಮಿಂಡನಿಗೊ?
ಕೊಮಾಲಿ : ಮಿಂಡರಿಗೆ.
ಗೌಡ್ತಿ : ಮಾಡೋದಲ್ಲದs ಹಾದರ ಮಾಡಿದೇ ಅಂತ ಹೇಳೋವಷ್ಟ ಧೈರ್ಯ ಬಂತೇನs ನಿನಗೆ? ನಿನ್ನ ಮಣಿಸುವಂಥವರು ಈ ಊರಾಗ ಯಾರೂ ಇಲ್ಲಂದ ತಿಳದೇನ? ನೀ ಏನ ಮಾಡೀಯೇ, ನಿನ್ನ ಸೊಂಟದಾಗಿನ ಬೆಂಕಿ ಹಾಂಗ ಮಾಡಸೈತಿ! ಗಂಡನ ದಾಗೀನ ಕೊಡು, ಈ ಊರಾಗೂ ಇರಬ್ಯಾಡ, ಎಲ್ಲಿ ಹಾಳಾಗಿ ಹೋಗ್ತಿ ಹೋಗು. ಈ ಊರಾಗಿನ ಯರಾದರೂ ತುತ್ತ ಅನ್ನ ಹಾಕಿದರೆ, ಅವರನ್ನ ಸುಡತೀನಿ. ಹೊರಬೀಳು.
(ಗೌಡ್ತಿಯ ಮಾತನ್ನು ಕೇಳಿ ಚಂಪಿ ಭಯಗೊಂಡು ಥಟ್ಟನೆ ಎದ್ದುನಿಂತು ತನ್ನ ಹೊಟ್ಟೆ ಹಿಡಿದುಕೊಂಡು “ಬ್ಯಾಡ ಬ್ಯಾಟ!” ಎಂದು ಕಿರುಚುತ್ತಾಳೆ. ತಕ್ಷಣ ತಾನು ಚೀರಿದ್ದು ಅರಿವಾಗಿ “ಬ್ಯಾಡ ಬ್ಯಾಡ” ಎಂದು ದನಿಯಿಲ್ಲದೆ ಬರೀ ತುಟಿಯಲ್ಲೇ ಗೊಣಗುತ್ತ ಮತ್ತೆ ಮಂಚದ ಮೇಲೆ ಒರಗುತ್ತಾಳೆ. ಹೊರಗಿನವರಿಗೆ ಇವಳು ಕಿರುಚಿದ್ದು ಕೇಳಿಸಿ, ಎಲ್ಲರೂ ಆ ಕಡೆ ನೋಡುತ್ತಾರೆ. ಗೌಡ್ತಿ ತಕ್ಷಣ ಅದನ್ನು ಗಮನಿಸಿ ಹೊರಗೆ ಕಳಿಸುವ ತರಾತುರಿಯಲ್ಲಿದ್ದಾಗ)
ಕೊಮಾಲಿ : ಗಂಡಂದರ ಇವನೊಬ್ಬನs ಅಲ್ಲ. ಊರಂದರ ಇದೊಂದs ಅಲ್ಲ.
(ಎನ್ನುತ್ತ ಹೋಗುವಳು. ಗೌಡ್ತಿಗೆ ಇನ್ನೂ ಕೋಪ ಬರುವುದು.)
ಗೌಡ್ತಿ : ಏ ಹಳಬಾ, ಪಂಚರಿಗಿ ಹೇಳು, – ಈ ರಂಡೀನ ಈಗಿಂದೀಗ ಊರ ಬಿಟ್ಟ ಹೊರಗ ಹಾಕಂತ.
ಹಳಬ : ಆಗಲೆವ್ವ.
ಗೌಡ್ತಿ : ಹೋಗ್ರೆಪ ಇನ್ನ.
(ಎಲ್ಲರೂ ಹೊರಗೆ ಹೋಗುವರು. ಗೌಡ್ತಿ ಸಿಟ್ಟಿನಿಂದ ಪರದೆ ಹರಿದು ಚಂಪಿಯ ರೂಮಿನತ್ತ ಖೆಕ್ಕರಿಸಿ ನೋಡುತ್ತ)
ಗೌಡ್ತಿ : ಏ ದುರ್ಗಿ.
ದುರ್ಗಿ : ಎವ್ವಾ.
ಗೌಡ್ತಿ : ಈಗೀಂದೀಗ ಬೀಗರ ಊರಿಗೆ ಹೋಗು. ಇಪ್ಪತ್ತೈದಲ್ಲ, ಐವತ್ತ ಸಾವಿರ ವರದಕ್ಷಿಣೆ ಕೇಳಿದರೂ ಒಪ್ಪಿಕೊ. ಎಂದ ಮೊದಲನೇ ಮುಹೂರ್ತ ಐತಿ ನೋಡು, ಅಂದs ಮದಿವಿ! ಮದಿವೀ ಇಲ್ಲೇ ನಮ್ಮೂರ ಶಿವಲಿಂಗನ ಗುಡ್ಯಾಗಂತ ಹೇಳು. ಮುಹೂರ್ತನ ನಾಳೇ ಇದ್ದರ ದಿಬ್ಬಣ ನಿನ್ನ ಜೋಡೀನs ಕರಕೊಂಬಾ. ತಿಳೀತಿಲ್ಲ?
ದುರ್ಗಿ : (ಚಿಂತೆಯಿಂದ) ಹೂನ್ರಿ.
ಗೌಡ್ತಿ : ಮತ್ತ ಹೊರಡೀಗ.

ವಿಭಾಗದ ಮುಖ್ಯಸ್ಥರ ಮಾತು

ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ಕನ್ನಡದ ಮಹತ್ವದ ಕೃತಿಗಳ ಬಗ್ಗೆ ಸಂವಾದ ಕಾರ್ಯಕ್ರಮಗಳನ್ನು ನಡೆಸಿ, ಅಲ್ಲಿ ಮಂಡಿತವಾದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತ ಬಂದಿದೆ. ಕಳೆದ ೧೦ ವರುಷಗಳಿಂದ ಈ ಸರಣಿ ಸಾಗಿ ಬಂದಿದೆ. ಪ್ರಸ್ತುತ ಈ ಸಂಕಲನ ಕೊಪ್ಪಳದಲ್ಲಿ ಲಕ್ಷ್ಮೀಶನ ‘ಜೈಮಿನಿ ಭಾರತ’ದ ಮೇಲೆ ನಡೆಸಿದ ಸಂವಾದ ಕಾರ್ಯ ಕ್ರಮದ ಫಲ.
ಸಾಹಿತ್ಯ ಅಧ್ಯಯನಗಳು ಹೇಗೆ ನಡೆದಿವೆ, ಹೇಗೆ ನಡೆಯುತ್ತಿವೆ ಮತ್ತು ಹೇಗೆ ನಡೆಯಬಹುದು ಎಂಬುದನ್ನು ಪರಿಶೀಲಿಸಲು ಈ ಯೋಜನೆ ಅತ್ಯಂತ ಉಪಯುಕ್ತವಾದುದು. ಈ ಬಗೆಯ ಅಧ್ಯಯನವನ್ನು ವ್ಯಕ್ತಿಕೇಂದ್ರಿತ ಪ್ರಯತ್ನಗಳೂ ನಡೆಸಬಹುದು. ಇದಲ್ಲದೆ ಇದನ್ನು ಒಂದು ಸಾಮೂಹಿಕ ಹಾಗೂ ಸಾಂಘಿಕ ಪ್ರಯತ್ನದ ಭಾಗವಾಗಿಯೂ ನಡೆಸಬಹುದು. ಇಡಿಯಾಗಿ ಕೃತಿ ಸಮೂಹವನ್ನು ಕೇಂದ್ರೀಕರಿಸಿ ಅಧ್ಯಯನ ಮಾಡುವುದು ಒಂದು ಸಾಧ್ಯತೆಯಾದರೆ, ಸ್ವತಂತ್ರವಾಗಿ ಮತ್ತು ನಿರ್ದಿಷ್ಟವಾಗಿ ಒಂದೊಂದು ಕೃತಿಯನ್ನು ಅಧ್ಯಯನ ಮಾಡುವುದು ಮತ್ತೊಂದು ಸಾಧ್ಯತೆ. ಈ ಎರಡನೇ ದಾರಿಯನ್ನೆ ಈ ಮಾಲಿಕೆಯಲ್ಲಿ ಆಯ್ಕೆ ಮಾಡಿಕೊಳ್ಳ ಲಾಗಿದೆ. ಇದು ನಮ್ಮ ವಿಭಾಗದ ಸಾಂಸ್ಥಿಕ ಜವಾಬ್ದಾರಿಯೂ ಹೌದು. ಈ ಜವಾಬ್ದಾರಿಯನ್ನು ಕಳೆದ ೧೦ ವರುಷಗಳಿಂದ ನಿರ್ವಹಿಸುತ್ತ ಬಂದಿದ್ದೇವೆ.

ಸಾಹಿತ್ಯ ಅಧ್ಯಯನವು ಎದುರಿಸುತ್ತಿರುವ ಸಮಸ್ಯೆಯ ಸ್ವರೂಪವನ್ನು ವಿವರಿಸಿಕೊಳ್ಳುವುದು ಮತ್ತು ಅದಕ್ಕೆ ಹೊಸ ದಾರಿಗಳನ್ನು ಕಂಡುಕೊಳ್ಳುವುದು ಈ ಮಾಲಿಕೆಯ ಮಹತ್ವದ ಆಶಯ ವಾಗಿದೆ. ಈ ಸ್ವರೂಪ ತಿಳಿಯಬೇಕಾದರೆ ಕೇವಲ ಸಾಹಿತ್ಯ ಶಿಸ್ತಿನವರು ಮಾತ್ರ ಇದರಲ್ಲಿ ತೊಡಗುವುದು ಏಕಮುಖಿ ಪ್ರಯತ್ನವಾಗುತ್ತದೆ ಎಂಬುದು ನಮ್ಮ ಸಾಮಾನ್ಯ ನಂಬಿಕೆ. ಹಾಗಾಗಿ ಇಡೀ ಮಾಲಿಕೆಯಲ್ಲಿ ವೃತ್ತಿಪರ ಸಾಹಿತ್ಯ ಅಧ್ಯಯನಕಾರರನ್ನು ಮಾತ್ರ ತೊಡಗಿಸಿ ಕೊಳ್ಳದೆ, ಅವರ ಜೊತೆಗೆ ಬೇರೆ ಬೇರೆ ಜ್ಞಾನಶಿಸ್ತಿನವರನ್ನು ತೊಡಗಿಸಿಕೊಳ್ಳಲಾಗಿದೆ. ಇವರೆಲ್ಲ ಒಂದು ನಿರ್ದಿಷ್ಟ ಸಾಹಿತ್ಯ ಕೃತಿಯನ್ನು ವಿವಿಧ ಕೋನಗಳಿಂದ ಮತ್ತು ಅವರವರ ಜ್ಞಾನಶಿಸ್ತುಗಳಿಂದ ಅಧ್ಯಯನ ಮಾಡುವುದೆ ಆಸಕ್ತಿದಾಯಕ ಕೆಲಸವಾಗಿ ಕಾಣುತ್ತಿದೆ.

ಇವತ್ತು ಸಾಹಿತ್ಯ ಅಧ್ಯಯನ ಎಂಬುದು ಕೇವಲ ‘ಶುದ್ಧ ಸಾಹಿತ್ಯಕ ಮಾನದಂಡ’ಗಳ ಮೂಲಕ ನಡೆಯುತ್ತಿಲ್ಲ. ಸಾಹಿತ್ಯದ ರಚನೆ, ಅದರ ಸಂವಹನ, ಅದರ ಓದು, ಅದರ ಪ್ರಕಾರ ಪಲ್ಲಟ, ಹಾಗೂ ಅಧ್ಯಯನ ಬಹಳ ವಿಸ್ತಾರವಾಗಿದೆ ಮತ್ತು ಸಂಕೀರ್ಣವಾಗಿದೆ. ಈ ವಿಸ್ತಾರ ಮತ್ತು ಸಂಕೀರ್ಣತೆಯ ಸ್ವರೂಪವನ್ನು ಸಮಾಜದ ವಿವಿಧ ವರ್ಗ ಹಿತಾಸಕ್ತಿಗಳು ತಮ್ಮ ದೃಷ್ಟಿಧೋರಣೆಗೆ ಅನುಗುಣವಾಗಿ ಬಳಸಿಕೊಳ್ಳುತ್ತಿವೆ ಹಾಗೂ ವ್ಯಾಖ್ಯಾನಿಸುತ್ತಿವೆ. ಕಳೆದ ಶತಮಾನದ ೯೦ರ ದಶಕದ ನಂತರ ಶುರುವಾದ ಈ ಪ್ರಕ್ರಿಯೆ ಸಾಹಿತ್ಯ ಅಧ್ಯಯನಗಳ ಮುಂದೆ ಬಲವಾದ ತಾತ್ವಿಕ ಸವಾಲುಗಳನ್ನು ನಿರ್ಮಾಣ ಮಾಡಿದೆ. ಈ ಸೂಕ್ಷ್ಮವಾದ ಎಚ್ಚರಿಕೆಯೇ ಈ ಮಾಲಿಕೆಯನ್ನು ಆರಂಭಿಸಲು ನಮಗೆ ಪರೋಕ್ಷ ಪ್ರೇರಣೆಯಾಗಿದೆ.

ಸಾಹಿತ್ಯವನ್ನು ಆಸ್ವಾದನೆಗಾಗಿ ಅಧ್ಯಯನ ಮಾಡುವ ಮತ್ತು ನೈತಿಕ ಮೌಲ್ಯಗಳ ಕೈಪಿಡಿ ಎಂದು ತೀರ್ಮಾನಿಸುವ ಅಧ್ಯಯನಗಳು ಸಾಹಿತ್ಯ ಅಧ್ಯಯನಕಾರರಿಗೆ ಪ್ರಯೋಜನಕಾರಿಯಾಗಿ ಕಾಣುತ್ತಿಲ್ಲ. ಸಾಹಿತ್ಯ ಅಧ್ಯಯನ ಎಂಬುದು ಸಾಮಾಜಿಕ ಅಧ್ಯಯನದ ಒಂದು ಭಾಗ ಎಂಬುದು ಒಂದು ಬಗೆಯಲ್ಲಿ ಇವತ್ತು ಒಪ್ಪಿತ ವಿಧಾನವಾಗಿದೆ. ಸಾಮಾಜಿಕ ಒತ್ತಡಗಳು ಹಾಗೂ ಸಾಹಿತ್ಯ ಅಧ್ಯಯನದ ಸಾಮಾಜಿಕ ಹೊಣೆಗಾರಿಕೆಯ ಅಘೋಷಿತ ಪ್ರಶ್ನೆಗಳು ಈ ವಿಧಾನದ ಹಿಂದೆ ಬಲವಾಗಿ ಕೆಲಸ ಮಾಡಿವೆ. ಪರಿಣಾಮವಾಗಿ ಸಾಹಿತ್ಯದ ನಿರೂಪಣೆಯ ಚರ್ಚೆಯನ್ನು ಸ್ವಲ್ಪಮಟ್ಟಿಗೆ ಹಿಂದೆ ಸರಿಸಿ, ಅದರ ಜಾಗದಲ್ಲಿ ಸಾಹಿತ್ಯದ ಆಶಯದ ಪ್ರಶ್ನೆಗಳನ್ನು ಮುಂಚೂಣಿಗೆ ತರಲಾಗಿದೆ. ಈ ಪ್ರಶ್ನೆಗಳನ್ನು ಬೇರೆ ಪದಗಳಲ್ಲಿ ‘ಸಾಂಸ್ಕೃತಿಕ ಪ್ರಶ್ನೆಗಳು’ ಎಂಬುದಾಗಿ ವಿವರಿಸಿಕೊಳ್ಳಲಾಗಿದೆ. ಈ ಬಗೆಯ ಪ್ರಯತ್ನಗಳು ಒಂದು ಕಡೆ ಸಾಹಿತ್ಯ ಪಠ್ಯವನ್ನು ಅಧ್ಯಯನದ ಸಂದರ್ಭದಲ್ಲಿ ವಿಸ್ತರಿಸಿವೆ ಹಾಗೂ ಸಂಕೀರ್ಣಗೊಳಿಸಿವೆ. ಸಾಹಿತ್ಯವನ್ನು ಅಧ್ಯಯನ ಮಾಡುವಾಗ ಕೇಳಲೇಬೇಕಾಗಿದ್ದ ಮತ್ತು ಹತ್ತಿಕ್ಕಲ್ಪಟ್ಟಿದ್ದ ಮುಖ್ಯ ಸಾಮಾಜಿಕ ಪ್ರಶ್ನೆಗಳನ್ನು ಮುಂಚೂಣಿಗೆ ತಂದಿವೆ. ಆದರೆ ಮತ್ತೊಂದು ಕಡೆ ಸಾಹಿತ್ಯ ಅಧ್ಯಯನ ವಿಧಾನವನ್ನು ಸ್ಥೂಲ, ಸರಳ ಮತ್ತು ನೇರಗೊಳಿಸಿವೆ. ಪರಿಣಾಮವಾಗಿ ‘ಸಾಹಿತ್ಯಕ ವಾಸ್ತವವು ಲೋಕ ವಾಸ್ತವದ ಯಥಾವತ್ ದಾಖಲೆ’ ಎಂದು ಯಾಂತ್ರಿಕವಾಗಿ ನಂಬಲಾಗುತ್ತಿದೆ. ಈ ಬಗೆಯ ಗ್ರಹಿಕೆಯು ‘ಸಾಹಿತ್ಯಕ ವಾಸ್ತವ ಮತ್ತು ಲೋಕ ವಾಸ್ತವ’ಗಳ ನಡುವಿನ ದ್ವಂದ್ವಾತ್ಮಕ ಸಂಬಂಧವನ್ನು ಅರಿಯದಂತೆ ಮಾಡಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಸಾಹಿತ್ಯವನ್ನು ಒಂದು ಪ್ರಕ್ರಿಯೆ ಎಂದು ನೋಡಬೇಕಾಗಿದ್ದ ಗ್ರಹಿಕೆಗೆ ಸಿಗಬೇಕಾದ ಮಹತ್ವ ಸಿಗದೇ ಹೋಗಿದೆ.

ಈ ಮಾಲಿಕೆಯಲ್ಲಿ ಮೇಲೆ ಚರ್ಚಿಸಿದ ಪ್ರಶ್ನೆಗಳು ಒಂದಿಲ್ಲ ಒಂದು ಬಗೆಯಲ್ಲಿ ನಮಗೆ ಎದುರಾಗುತ್ತಲೆ ಬಂದಿವೆ. ಈ ಪ್ರಶ್ನೆಗಳು ಮೇಲಿಂದ ಮೇಲೆ ಎದುರಾಗುತ್ತಿರುವುದು ಹಾಗೂ ಈ ಮಾಲಿಕೆಯಲ್ಲಿ ಬೇರೆ ಬೇರೆ ಜ್ಞಾನಶಿಸ್ತಿನವರು ತೊಡಗಿರುವುದು – ಈ ಕಾರಣಗಳಿಂದ ಈ ಸರಣಿ ಸಾಹಿತ್ಯ ಅಧ್ಯಯನವನ್ನು ಜಡಗೊಳಿಸಲಿಲ್ಲ. ಪಠ್ಯದಿಂದ ಪಠ್ಯಕ್ಕೆ ಈ ಮಾಲಿಕೆಯ ಅಧ್ಯಯನ, ಚರ್ಚೆ ಹಾಗೂ ಸಂವಾದಗಳು ಸಾಹಿತ್ಯ ಅಧ್ಯಯನದ ಹಲವು ಸಾಧ್ಯತೆಗಳನ್ನು, ವಿಭಿನ್ನ ದಾರಿಗಳನ್ನು ತೋರಿಸುತ್ತಲೆ ಸಾಗಿವೆ. ಇದು ಈ ಮಾಲಿಕೆಯ ಸಕಾರಾತ್ಮಕ ಆಯಾಮ ವಾಗಿದೆ. ಹಾಗಾಗಿಯೇ ಈ ಸರಣಿಗೆ ಕನ್ನಡದ ಬೌದ್ದಿಕ ವಲಯದಲ್ಲಿ ಮಹತ್ವದ ಬೇಡಿಕೆ ಬಂದಿದೆ.

ಪ್ರಸ್ತುತ ಲಕ್ಷ್ಮೀಶನ ‘ಜೈಮಿನಿ ಭಾರತ’ವು ಅದರ ನಿರ್ಮಾಣ, ವಸ್ತು, ನಿರೂಪಣ ಕ್ರಮ, ಸಂವಹನ, ಅದರ ಓದು, ಅದರ ಪ್ರಕಾರ ಪಲ್ಲಟ, ಅದರ ಶೋತೃವರ್ಗ ಹಾಗೂ ಅದರ ವಿವಿಧ ಅಧ್ಯಯನಗಳು ಇವೆಲ್ಲವೂ ಈ ಸಂವಾದದಲ್ಲಿ ಮಹತ್ವದ ಚರ್ಚೆಗೆ ಒಳಗಾಗಿವೆ. ಏಕಾಂಗಿಯಾಗಿ ಓದಿಕೊಳ್ಳಬೇಕಾದ ಸಾಹಿತ್ಯ ಪಠ್ಯವೊಂದು ಶೋತೃ ಸಮುದಾಯದಲ್ಲಿ ಕೇಳಿಸಿ ಕೊಳ್ಳಬೇಕಾದ ಬದಲಾವಣೆಗೆ ಯಾಕೆ ಒಳಗಾಗುತ್ತದೆ ಎಂಬುದು ಬಹಳ ಮುಖ್ಯವಾದ ಪ್ರಶ್ನೆ. ಈ ಹಿಂದಿನ ಪಂಪ, ರನ್ನರ ಕೃತಿಗಳಾಗಲಿ ಇಲ್ಲವೆ ವಚನಗಳೇ ಆಗಲಿ ಈ ಮಾದರಿಯಲ್ಲಿ ಗುಂಪಿನಲ್ಲಿ ಕೇಳಿಸಿಕೊಳ್ಳಬೇಕಾದ ಅವಕಾಶಕ್ಕೆ ಯಾಕೆ ತೆರೆದುಕೊಳ್ಳಲಿಲ್ಲ ಎಂಬ ಪ್ರಶ್ನೆ ಮುಖ್ಯವಾದುದು. ಇದು ‘ಜೈಮಿನಿ ಭಾರತ’ ಕೃತಿಯ ವಸ್ತುವಿನಲ್ಲಿದೆಯೊ, ಕೃತಿಯ ಆಶಯ ದಲ್ಲಿದೆಯೊ ಅಥವಾ ನಿರೂಪಣೆಯ ಕ್ರಮದಲ್ಲಿದೆಯೊ ಎಂಬ ಪ್ರಶ್ನೆಯನ್ನು ಎತ್ತಬೇಕಾಗಿದೆ. ಜೊತೆಗೆ ಜೈಮಿನಿ ಭಾರತವು ಯಾಕೆ ಬಹಳಷ್ಟು ಯಕ್ಷಗಾನ ಕೃತಿಗಳಿಗೆ ಆಕರವಾಯಿತು ಎಂಬುದೂ ಕೂಡ ಮುಖ್ಯ ಪ್ರಶ್ನೆಯೆ. ಕೇಳಿಸಿಕೊಳ್ಳುವ ಕೃತಿಯೊಂದನ್ನು ಏಕಾಂಗಿಯಾಗಿ ಓದಿಕೊಂಡಾಗ ಓದುಗರು/ಅಧ್ಯಯನಕಾರರು ಕಳೆದುಕೊಳ್ಳುವುದೇನು ಹಾಗೂ ಪಡೆದು ಕೊಳ್ಳುವುದೇನು ಎಂಬುದೂ ಕೂಡ ಮುಖ್ಯವಾದ ಪ್ರಶ್ನೆಯೇ. ಪ್ರಸ್ತುತ ಸಂಕಲನದ ಪ್ರಬಂಧ ಕಾರರು ಈ ಎಲ್ಲ ಪ್ರಶ್ನೆಗಳನ್ನು ವಿವರಿಸಿಕೊಂಡಿರುವ ಕ್ರಮ ಹಾಗೂ ಅವುಗಳ ಜೊತೆಯಲ್ಲಿ ವೈಚಾರಿಕವಾಗಿ ಆಲೋಚಿಸಿರುವ ವಿಧಾನ ಗಮನ ಸೆಳೆಯುವಂತಿದೆ.

ಈ ಸಂವಾದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ, ನಂತರ ಈ ಲೇಖನಗಳನ್ನು ಕಷ್ಟಪಟ್ಟು ಸಂಕಲಿಸಿರುವ ಗೆಳೆಯ ಡಾ. ಅಮರೇಶ ನುಗಡೋಣಿ ಅವರಿಗೆ, ವಿಭಾಗದ ಎಲ್ಲ ಸದಸ್ಯರಿಗೆ, ವಿಭಾಗದಲ್ಲಿ ಆಡಳಿತ ಸಿಬ್ಬಂದಿಯಾಗಿದ್ದ ಶ್ರೀ ಶಿವಪ್ಪ ಕೋಳೂರು ಅವರಿಗೆ, ವಿಭಾಗದ ಸಂಶೋಧನ ವಿದ್ಯಾರ್ಥಿಗಳಿಗೆ ವಂದನೆಗಳು.