(ರಾತ್ರಿ. ಪಾರೋತಿ ತನ್ನ ರೂಮಿನಲ್ಲಿ ಮಲಗಿದ್ದಾಲೆ. ಚಂಪಿ ತನ್ನ ರೂಮಿನಲ್ಲಿ ಶೃಂಗಾರಗೊಳ್ಳುತ್ತಿದ್ದಾಳೆ. ಶೀಲಿಯೂ ಅಷ್ಟಿಷ್ಟು ಶೃಂಗಾರಗೊಂಡು ತನ್ನ ರೂಮಿನಿಂದ ಮೆಲ್ಲಗೆ ಕೆಳ ಬಂದು ಚಂಪಿಯ ರೂಮಿನ ಹೊರಬದಿಯಲ್ಲಿ ನಿಲ್ಲುತ್ತಾಳೆ.)
ಪಾರೋತಿ : ದುರ್ಗೀ ಇವ ಎಲ್ಲಿ ಹೋಗ್ಯಾನಂತ ನಿನಗೇನಾರ ಗೊತ್ತೈತೇನs?
ದುರ್ಗಿ : (ಒಳಗಿನಿಂದ) ಇಲ್ಲs ಎವ್ವಾ. ಯಾಕs? ನಿನಗೇನೂ ಹೇಳಿಲ್ಲೇನ?
ಪಾರೋತಿ : ನನ್ನ ಲೆಕ್ಕದಾಗ ಇಟ್ಟಿದ್ದರಲ್ಲೇನು? ನೋಡಿದಾಗೊಮ್ಮಿ ನನ್ನ ಹೆಸರ ಸೈತ ಮರತವರ‍್ಹಾಂಗ ಮಾಡತಾನ.
ದುರ್ಗಿ : (ಒಳಗಿನಿಂದಲೇ) ಊರ ಮಂದಿ ಉಂಡಮಲಗ್ಯಾರಲ್ಲs ಎವ್ವಾ, ಎಲ್ಲಿ ಹೋಗಿದ್ದಾನು?
ಪಾರೋತಿ : ಯಾ ಕಾಡಿನಾಗ ಕುದರೀ ಹತ್ತಿಕೊಂಡ ಅಡ್ಡ್ಯಾಡತಾನೊ!
ಶೀಲಿ : (ಪಾರೋತಿಗೆ ಕೇಳಿಸುವಂತೆ)
ನಿನಗೇನಾರ ಮಾವ ಹೇಳ್ಯಾನೇನನs ಚಂಪಿ?
ಚಂಪಿ : (ಜೋರಿನಿಂದ) ನನಗ್ಯಾಕ ಹೇಳ್ತಾನ?
ಶೀಲಕ್ಕ : ದಿನಾ ತೋಟಕ್ಕ ಊಟಾ ಒಯ್ತಿಯಲ್ಲ, ಅಲ್ಲಿ ಹೇಳ್ಯಾನೇನು?-ಅಂದೆ.
ಚಂಪಿ : ದೀಡೀ ಮಾತಾಡಿದರ ನಾಲಿಗಿ ಕೀಳತೀನಿ.
ಶೀಲಕ್ಕ : ಇಲ್ಲಂದರ ಇಲ್ಲಂತ ಹೇಳಲ್ಲ. ಅದಕ್ಯಾಕಷ್ಟ ಸಿಟ್ಟ ಮಾಡ್ತಿ? ಏನೋ ಆಗಾಗ ಅವನ ಕುದರೀ ಹತ್ತತ್ತೀ, ಸಣ್ಣ ಸೊಸಿ ಅಂತ ಅವಗೂ ನಿನ್ನ ಮ್ಯಾಲ ಮಾಯೇ ಭಾಳ ಐತಿ, ನಿನಗಾದರೂ ಹೇಳಿದ್ದಾನು, ಅಂತ ಅಂದುಕೊಂಡ್ನೆವಾ.
ಚಂಪಿ : (ಇವಳೂ ಅದೇ ವ್ಯಂಗ್ಯದಿಂದ)
ನಮಗ ಎಷ್ಟಂದರೂ ಕುದರೀ ಬೆನ್ನ ಗೊತ್ತವಾ. ನೀ ಅದರ ಲದ್ದೀ ಸೈತ ಕಂಡಾಕಿ. ಯಾಕಂದರ ನಾಕೈದ ಬರೆ ಒದಿಸಿಕೊಂಡಿದೀ ನೋಡು.
(ಶೀಲಿಗಿ ಇದರಿಂದ ನೋವಾಗುತ್ತದೆ. ಇಲ್ಲೀತನಕ ಪಾರೋತಿಗೂ ಕೇಳಿಸುವಂತೆ ಮಾತಾಡುತ್ತಿದ್ದ ಚಂಪಿ ಈಗ ಮೆಲ್ಲಗೆ ಶೀಲಿಗೆ ಮಾತ್ರ ಕೇಳಿಸುವಂತೆ)
ಸಾಕ? ಇನ್ನಷ್ಟ ಹೇಳಲಾ?
ಶೀಲಕ್ಕ : ಥೂ ಹಲ್ಕಟ್ಟ ರಂಡೆ!
ಪಾರೋತಿ : ಶೀಲೀ, ಕೊಮಾಲಿ ಮತ್ತ ಓಡಿಬಂದಾಳಂತ, ಖರೇ ಏನ?
ಶೀಲಕ್ಕ : ಅದೇನೋ ನನಗ್ಗೊತ್ತಿಲ್ಲವಾ.,
ಚಂಪಿ : (ಮೆಲ್ಲಗೆ) ಗೊತ್ತಿಲ್ಲ್ಯಾಕಂತಿ? ಮಧ್ಯಾಹ್ನದಾಗ ಭೇಟ್ಯಾಗಿದ್ದೀ, (ಜೋರಿನಿಂದ) ಹೇಳ ಶೀಲಕ್ಕಾ, ಕೊಮಾಲಿ ಮಾಡೋದನ್ನೆಲ್ಲಾ ಕದ್ದ ಕದ್ದ ನೋಡತಾ ಬೆರಳ ಸೀಪತಿ, ಹೇಳಲ್ಲ.
ದುರ್ಗಿ : ಆಕೀ ಸುದ್ದಿ ಏನಂತ ಮಾತಾಡ್ತೀರಿ, ನಿಮ್ಮವ್ವ ಬರೋ ಯಾಳೇ ಆತು, ಇನ್ನ ಮಲಗಬಾರದ?
ಪಾರೋತಿ : ಕದ್ದ ಕದ್ದ ಏನ ನೋಡತಾಳು?
(ಶೀಲಿಗೆ ಆತಂಕವಾಗುತ್ತದೆ. ಚಂಪಿಯ ಬಾಯಿ ಹೇಗೆ ನಿಲ್ಲಿಸಬೇಕೆಂದು ತಿಳಿಯದೆ ಒದ್ದಾಡುತ್ತಾಳೆ.)
ಚಂಪಿ : ಅದs ಕೊಮಾಲಿ ಮಧ್ಯಾಹ್ನ ಮನೀಗಿ ಬಂದು ಶೀಲಕ್ಕಗ ಎಲ್ಲಾ ಕತಿ ಮಾಡಿ ಹೇಳಿ ಹೋಗ್ಯಾಳ.
ಪಾರೋತಿ : ಹೌಂದೇನs ಶೀಲಿ? ಮಧ್ಯಾಹ್ನ ಕೊಮಾಲಿ ಬಂದಿದ್ಲ?
ಶೀಲಕ್ಕ : ಹೌಂದು.
ಪಾರೋತಿ : ಮತ್ತ ನನಗೇನೂ ಗೊತ್ತಿಲ್ಲಂದಿ?
ದುರ್ಗಿ : ತಂಪೊತ್ತಿನಾಗ ಇದೇನ ಸುದ್ದೀ ಹೇಳತೀಯೆ ಚಂಪಕ್ಕ?
ಚಂಪಿ : ಎಷ್ಟ ಮಜಾ ಐತಿ ಕತಿ ಅದು! ಕೊಮಾಲಿ ಗಂಡನ ಜೋಡಿ ಮಲಗಿದ್ದಳಂತ. ಗಂಡಗ ನಿದ್ದಿ ಹತ್ತಿತ್ತಂತ ಅಷ್ಟರಾಗ ಗಲ್ಲದ ಮ್ಯಾಲ ಹೂ ಬಿತ್ತಂತ. ಅವ್ ಇದೇನ?, -ಅಂತ ನೊಡತಾಳ: ನಮ್ಮೂರ ಹುಡುಗೋರೆಲ್ಲಾ ಕಿಡಿಕ್ಯಾಗ ನಿಂತಾರಲ್ಲ! ಈಕಿಗೂ ಮನಸ ತಡ್ಯಾಕಾಗದs ಬಂದಳಂತ. ಮತ್ತೇನ ಕೇಳ್ತಿ? -ಹುಡುಗೋರೆಲ್ಲಾ ಈಕೀನ್ನ ಎತ್ತಿಕೊಂಡ ಕಾಡಿಗಿ ಹೋದರಂತ. ಆಮ್ಯಾಲ ಕಾಡಿನಾಗೇನ ಮಜಾ ಅಂತೀ… ಮುಂದಿಂದ ನೀ ಹೇಳs ಶೀಲಕ್ಕಾ….
ದುರ್ಗಿ : ಏನ ಕೇಳ್ತಿ ಮಲಕ್ಕೊಳ್ಳಾ ಎವ್ವಾ. ಮನೆತನಸ್ಥ ಹುಡಿಗೇರು ಮಾತಾಡೋ ಮಾತs ಇವೆಲ್ಲಾ?
ಪಾರೋತಿ : ಇದೆಲ್ಲ ನಿನಗ್ಹೆಂಗ ತಿಳೀತs ಚಂಪಿ?
ಚಂಪಿ : ಶೀಲಕ್ಕೆ ಹೇಳಿದ್ಲು. ಅಲ್ಲೇನs ಶೀಲಕ್ಕಾ?
ಪಾರೋತಿ : ಎಲ್ಲಾ ಸುಳ್ಳು. ಏನೇನೋ ಹುಟ್ಟಿಸಿಕೊಂಡ ಹೇಳತಾಲ.
ಪಾರೋತಿ : ಥೂ ರಂಡೇರ್ಯಾ! ನಿಮ್ಮ ರಗತದ ಗುಣ ಎಲ್ಲಿಹೋದೀತ ಹೇಳು. ಅವ್ವ ಬರಲಿಲ್ಲೇನ ಇನ್ನೂ?…
ದುರ್ಗಿ : ನಿನ್ನ ಚಿಂತಿ ನಿನಗs ಸಾವಿರದಾವ, ಮತ್ತೊಂದು ಯಾಕ ಹಚ್ಚಿಕೊಳ್ತಿ? ಏನಿದ್ದರೂ ನಿಮ್ಮವ್ವ ನೋಡಿಕೊಳ್ತಾಳ; ನೀ ಸುಮ್ಮನ ಮಲಗು. ಬೆಳೆದ ದೊಡ್ಡವರಾದರೂ ಇನ್ನs ಹುಡುಗಾಟಿಕಿ ಬಿಟ್ಟೇ ಇಲ್ಲ, ಇಬ್ಬರೂ. ಎಂದ ಸಮ ಬುದ್ಧಿ ಬರತೈತೋ, ದೇವರs ಬಲ್ಲ.
(ಶೀಲಿ ಮಲಗುವುದಕ್ಕೆ ತನ್ನ ರೂಮಿಗೆ ಹೊರಡುವಳು. ದುರ್ಗಿ ಬಂದು ಪಾರೋತಿಗೆ ಔಷಧ ಕುಡಿಸಿ, ದೀಪ ಆರಿಸಿ ಮಲಗುವುದಕ್ಕೆ ಹೋಗುವಳು. ಪಾರೋತಿ ಹೊರಳಿ ಮಲಗುವಳು. ಎಲ್ಲ ನಿಶ್ಯಬ್ದವಾದುದನ್ನು ಗಮನಿಸಿ ಚಂಪಿ ತನ್ನ ರೂಮಿನಲ್ಲಿ ಕನ್ನಡಿ ಮುಂದೆ ನಿಂತು ಇನ್ನಷ್ಟು ಶೃಂಗಾರವಾಗುತ್ತಿದ್ದಾಳೆ. ಆಗಾಗ ಕಿಡಕಿಯಿಂದ ಹೊರಗೆ ಇಣಕುತ್ತಿದ್ದಾಳೆ. ಶೀಲಕ್ಕ ತನ್ನ ರೂಮಿನಲ್ಲಿ ಉರಿಯುತ್ತಿರುವ ದೀಪ ಆರಿಸಿ ಮೆಲ್ಲಗೆ ಹೊರಬರುತ್ತಾಳೆ. ಕೆಲವು ಮೆಟ್ಟಿಲು ಇಳಿಯುವಷ್ಟರಲ್ಲಿ ಹೊರಗಿನಿಂದ ಗೌಡ್ತಿ ಬರುತ್ತಿರುವುದು ಗೊತ್ತಾಗಿ ಮತ್ತೆ ಹಿಂದೆ ಸರಿಯುತ್ತಾಳೆ. ಗೌಡ್ತಿ ಬಂದು ತುಸು ಯೋಚಿಸಿ ಅಲ್ಲೇ ತೂಗು ಹಾಕಿದ್ದ ಬಂದೂಕು ತೆಗೆದುಕೊಳ್ಳುತ್ತಾಳೆ.)
ಗೌಡ್ತೀ : ದುರ್ಗೀ.
ದುರ್ಗಿ : (ಏಳುತ್ತ) ಏನ್ರವ್ವಾ?
ಗೌಡ್ತಿ : ಯಾರೋ ನಮ್ಮ ಬಣಿವೀ ಸುತ್ತ ನಡದಾಡಿಧಾಂಗಿತ್ತು. ನೀ ಏನಾರ ನೋಡಿಯೇನು? ನಾಕೈದ ದಿನ ಹಿಂಗಾತು…
ದುರ್ಗಿ : ಇಷ್ಟದಿನ ನನ್ನ ಕಣ್ಣಿಗ್ಯಾರೂ ಬಿದ್ದೇ ಇಲ್ಲರಿ.
ಗೌಡ್ತಿ : ಈ ಹುಲಿಗೊಂಡ ಎಲ್ಲಿ ಹೊಗಿದ್ದಾನು? ಮನ್ಯಾಗ ಗಂಡಸಿದ್ದೂ ಇಲ್ಲಧಾಂಗಾಗೇತಿ. ಹೋಗಿ ನೋಡಿ ಬರೋಣು, ಬಾಲ.
(ಗೌಡ್ತಿ ಹೊರಡುವಳು. ದುರ್ಗಿಯೂ ಬೆನ್ನು ಹತ್ತುವಳು. ಇಬ್ಬರೂ ಹೊರಗೆ ಹೋಗುತ್ತಲೂ ಶೀಲಕ್ಕ ಮೆಲ್ಲಗೆ ಕೆಳಗಿಳಿದು ಬರುವಳು. ಪಾರೋತಿಯ ರೂಮಿನಲ್ಲಿ ಹಣಕಿ, ಅವಳು ಮಲಗಿದ್ದು ಖಾತ್ರಿಯಾಗಿ ಚಂಪಿಯ ರೂಮಿಗೆ ಹೋಗುವಳು. ಗೌಡ್ತಿ ಇರೋತನಕ ಮಲಗಿದಂತೆ ನಟಿಸುತ್ತಿದ್ದ ಚಂಪಿ ಎದ್ದು ಕಿಟಕಿಯಲ್ಲಿ ಹಣಿಕಿ, ಹೊರಡುವ ಸಿದ್ಧತೆಯಲ್ಲಿದ್ದಾಗ ಶೀಲಕ್ಕ ಬಾಗಿಲಲ್ಲಿ ಕಾಣಿಸುತ್ತಾಳೆ. ಮೊದಮೊದಲು ಪಾರೋತಿಗೆ ಕೇಳಿಸದಂತೆ ಮಾತಾಡುತ್ತಿದ್ದರೂ ಆತಂಕ ಹೆಚ್ಚಾದಂತೆ ಇಬ್ಬರ ದನಿಗಳೂ ಸಾಮಾನ್ಯ ಮಟ್ಟಕ್ಕೆ ಏರುತ್ತವೆ.)
ಶೀಲಕ್ಕ : ಏನು! ಮಲಗಬೇಕಾದರೂ ಇಷ್ಟ ಶಿಂಗಾರ ಆಗಬೇಕ? ಓಹೊ! ಕನಸಿನಾಗೂ ಚಂದ ಕಾಣಬೇಕಲ್ಲ, ಅದಕ್ಕs ಇರಬೇಕು.
ಚಂಪಿ : ನನ್ನ ಹಾಂಗ ನೋಡಬ್ಯಾಡ, ನೋಡಿದರ ನಿನ್ನ ಮುಖದ ಮ್ಯಾಲ ವಾಂತೀ ಮಾಡಿಕೋತೀನಿ.
ಶೀಲಕ್ಕ : ನಿನ್ನಿ ರಾತ್ರಿ ಎಷ್ಟೋತ್ತಿಗೆ ಮಲಿಗಿದಿ?
ಚಂಪಿ : ಯಾಕ?
ಶೀಲಕ್ಕ : ರಾತ್ರಿ ಹಿತ್ತಲಾಗ ಕುದರೀ ಸಪ್ಪಳ ಕೇಳಿಸ್ತು.
ಚಂಪಿ : ಕುದರಿ ಹಗ್ಗಾ ಹರಕೊಂಡು ಓಡ್ಯಾಡಿರಬೇಕು.
ಶೀಲಕ್ಕ : ಅದರ ಮ್ಯಾಲ ಯಾರೋ ಕುಂತಿದ್ದರು!
ಚಂಪಿ : ನಿನಗ ಹ್ಯಾಂಗ ಗೊತ್ತಾಯ್ತು?
ಶಿಲಕ್ಕ : ನಾ ನೋಡಿದೆ.
ಚಂಪಿ : ಯಾರು?
ಶೀಲಕ್ಕ : ಮಾವ.
ಚಂಪಿ : (ಶೀಲಕ್ಕನ ಜುಟ್ಟು ಹಿಡಿಯುತ್ತ)
ಹುಚ್ಚರಂಡೆ ಸುಳ್ಳ್ಯಾಕ ಹೇಳ್ತಿ?
(ಇಬ್ಬರೂ ತುಸು ಹೊತ್ತು ಕಿತ್ತಾಡುವರು. ಶೀಲಕ್ಕ ಬಿಡಿಸಿಕೊಂಡು)
ಶಿಲಕ್ಕ : ಸುಳ್ಳ? ಹೋಗಿ ಕಿಡಿಕ್ಯಾಗ ನೋಡು.
(ಚಂಪಿ ಕಿಡಿಕಿಯಲ್ಲಿ ನೋಡಿ ತುಡುಗು ಸಿಕ್ಕಿದ್ದಕ್ಕೆ ಆತಂಕಗೊಳ್ಳುವಳು.)
ಶೀಲಕ್ಕ : ಯಾರಿದ್ದಾರ ಹೇಳಲ್ಲ.
ಚಂಪಿ : ಹೌದು, ಮಾವನs
(ಶೀಲಕ್ಕ ಜಗಳದಿಂದ ಅಸ್ತವ್ಯಸ್ತವಾಗಿರುವ ತನ್ನ ಉಡುಪನ್ನು ಸರಿಪಡಿಸಿಕೊಳ್ಳುವಳು. ಹೊರಗೆ ಪಡಸಾಲೆಯಲ್ಲಿ ಗೌಡ್ತಿ. ಅವಳ ಹಿಂದಿನಿಂದ ದುರ್ಗಿ ಬರುವರು.)
ಚಂಪಿ : ಇಷ್ಟುದಿನ ಕೊಮಾಲಿ ಏನ ಮಾಡತಾಳಂತ ಕದ್ದಕದ್ದ ನೋಡತಿದ್ದಿ. ಈಗ ನನಗೂ ಗಂಟ ಬಿದ್ದೇನs ಬೇತಾಳ? ನಾಕೈದ ಸಲ ನಿನ್ನ ಕನಸಿನಾಗ ನೋಡಿದೆ. ನಾಕೈದ ಸಲsನೂ ಸತ್ತಿದ್ದಿ. ಮತ್ತ ಜೀವಂತ ಎದ್ದ ಬಂದ ನನ್ನ ಬೆನ್ನ ಯಾಕ ಕಾಯತೀಯೆ?
ಶೀಲಕ್ಕ : ಯಾಕ ಗೊತ್ತಿಲ್ಲಾ; ಮನಿತನದ ಮಾನಾ ಕಾಯಾಕ. ಹುಲಿಗೊಂಡ ಮಾವ, ನಮ್ಮಿಬ್ಬರ ಅಕ್ಕನ ಗಂಡ, ನೆಪ್ಪಿರಲಿ.
ಚಂಪಿ : ನಿನ್ನಷ್ಟs ನನಗೂ ಗೊತ್ತೈತಿ.
ಶೀಲಕ್ಕ : ಗೊತ್ತಿದ್ದಿದ್ದರ ಹಿಂಗ ಮಾಡತಿರಲಿಲ್ಲ.
ಚಂಪಿ : ದೇವರೂ, ನಿನ್ನ ಕುರುಡೀನ ಮಾಡಿದ್ದರ ಎಷ್ಟ ಚೆಲೋ ಇತ್ತು, ಗೊತ್ತಾ?
ಶೀಲಕ್ಕ : (ಮೈಮೇಲಿನ ಗಾಯಗಳನ್ನು ಸಾವರಿಸಿಕೊಳ್ಳುತ್ತ)
ಮಾವನ್ಹಾಂಗs ಎಷ್ಟ ಕಸುವಿದ್ದೀಯೆ?
ಚಂಪಿ : ಮಾವನ ಕಸುವು ನಿನಗೂ ಗೊತ್ತಾಗೇತಿ!…
ಶೀಲಕ್ಕ : ಬಾಯ ಮುಚ್ಚದಿದ್ದರ ನೀ ಮಾಡೋದನ್ನೆಲ್ಲಾ ಅವ್ವಗ ಹೇಳ್ತೀನ್ನೋಡು.
ಚಂಪಿ : ಹೇಳ ಹೋಗs. ಮೊನ್ನಿ ನೀ ಮಾವನ ಕೆಳಗ ಉಳ್ಳಾಡಿ ಬಂದದ್ದ ನನಗ ಗೊತ್ತಿಲ್ಲಂದಿ? ಮೈಗೆಲ್ಲ ಕುದರಿ ಲದ್ದಿ ಹತ್ತಿತ್ತು….
ಶೀಲಕ್ಕ : ಥೂ ದರಿದ್ರ ರಂಡೆ!
(ಇದನ್ನು ಕೇಳಿ ಗೌಡ್ತಿ ಕುಸಿಯುವಳು. ಮಾತಿಲ್ಲದೆ ದುರ್ಗಿ ಅವಳ ಸಹಾಯಕ್ಕೆ ಒದಗುವಳು.)
ಮನೆತನದ ಮಾನ

ಬಾರೊ ಬಾರೊ ನಮ್ಮಯ್ಯಾ
ಕೇಳಬೇಕೇ? ಮಾರನೇ ದಿನ ಸೂರ್ಯ ನೆತ್ತಿಗೆ ಬರುವುದರೊಳಗಾಗಿ ಹೊಲಗೇರಿಯಾಚೆ, ಲಗಮವ್ವನ ಗುಡಿಸಲದಿಂದ ಸ್ವಲ್ಪ ದೂರದಲ್ಲೇ ಹೊಸ ಗುಡಿಸಲೆದ್ದಿತು. ಸ್ವತಃ ಗುಡಸೀಕರನೇ ಮುಂದೆ ನಿಂತು ಆದರ ಹುವೇನವೇ ನೋಡಿಕೊಂಡ. ಒಂದಿಬ್ಬರು ಆಳುಗಳನ್ನು ಹೆಚ್ಚಾಗಿ ಹಚ್ಚಿಸಿ ಹಸನು ಮಾಡಿಸಿದ. ಜನ ಇದನ್ನು ಅಷ್ಟಾಗಿ ಗಮನಿಸಲಿಲ್ಲ. ದುರ್ಗಿ ಮಾತ್ರ ಲಗಮವ್ವನ ಕಣ್ಣು ತಪ್ಪಿಸಿ ಆಗಾಗ ಏನೋ ನೆಪಗಳಿಂದ ಹೊರಬಂದು ಗುಡಸೀಕರನನ್ನೇ ಆಸೆಬುರುಕಿಯಾಗಿ ನೋಡುತ್ತಿದ್ದಳು. ತನ್ನ ಕಡೆ ಒಂದು ಸಲವಾದರೂ ನೋಡಲೆಂದು ಹಿಂದೆ ಮುಂದೆ ಸುಳಿದಾಡಿದಳು. ಹಾದುಹೋಗುತ್ತಿದ್ದ ಅವ್ವಕ್ಕಗಳನ್ನು ಸ್ವಲ್ಪ ಏರುದನಿಯಲ್ಲೇ ಮಾತಾಡಿಸಿ ವಿನಾಕಾರಣ ಕುಲುಕುಲು ನಕ್ಕಳು. ಇವಳ ಈ ಹಗುರನಡೆ ಲಗಮವ್ವನಿಗೆ ತಿಳಿದು ಗದರಿಕೊಂಡಳು ದುರ್ಗಿ ವಿಧಿಯಿದಲ್ಲದೆ ಒಳಸೇರಬೇಕಾಯ್ತು.
ಬಂದಂದಿನಿಂದ ಚಿಮಣಾ ಹಾಗೂ ಬಸವರಾಜು ಗುಡಸೀಕರನ ತೋಟದಲ್ಲೇ ಇದ್ದರು. ಈಗ ಅವರ ಬಿಡಾರ ಸಿದ್ಧವಾಯಿತಲ್ಲ. ಮಧ್ಯಾಹ್ನದ ಉರಿಬಿಸಿಲು, ಮೃಗ ಮಳೆಯ ಗುರುತು ಒಡೆದಿರಲಿಲ್ಲ. ದನಕರುಗಳು ಮರದ ನೆರಳಿಗೆ ನಿಂತು ಬಾಯಿಬಿಡುತ್ತಿದ್ದವು ಕೆರೆಯಲ್ಲಿ ಈಜು ಬಿದ್ದ ಮಕ್ಕಳು ದನಗಳ ಹಾಗೆ ಅಲ್ಲೇ ಆಡುತ್ತ ಹೊರಗೆ ಬರಲು ನಿರಾಕರಿಸುತ್ತಿದ್ದವು. ಭಾವುಕ ಭಕ್ತರೀಗ ಗುಡಿಗೆ ಹೋಗಿದ್ದರೆ ಕರಿಮಾಯಿಯ ಮುಖದಲ್ಲೂ ತಿಳಿ ಬೆವರು ಕಾಣಬಹುದಿತ್ತು. ಅರ್ಥಾತ್ ಅಂಥಾ ಬಿಸಿಲಿತ್ತು. ಇಂಥಾ ಉರಿ ಉರಿ ಬಿಸಿಲಿನಲ್ಲಿ ತೋಟದಿಂದ ಚಿಮಣಾ ಮತ್ತು ಬಸವರಾಜು ಕಳ್ಳನ ನೇತೃತ್ವದಲ್ಲಿ ಬಂದು ತಮಗಾಗಿ ತಯಾರಾಗಿದ್ದ ಗುಡಿಸಲು ಹೊಕ್ಕರು.
ಅವರು ಬಂದು ಹೊಕ್ಕದ್ದರಿಂದ ಕೆಲವು ಚಿಮಣಾ ಭಕ್ತರು ಬಂದರು. ಯಾರೂ ಬೆದರಿಸಲಿಲ್ಲವಾದ್ದರಿಂದ ಅಲ್ಲೇ ನಿಂತರು. ಗುಡಸೀಕರ ಇನ್ನೂ ದೇಖರೇಖಿ ಮಾಡುತ್ತ ನಿಂತಿದ್ದಾನೆ. ಚತುಷ್ಟಯರು ಓಡಾಡುತ್ತಿದ್ದಾರೆ. ಭಕ್ತರು ಜೋಡಿಯಾಗಿ ಪರಸ್ಪರ ಭುಜಗಳ ಮೇಲೆ ಕೈಯೂರಿ ಜೊಲ್ಲು ಸುರಿವ ಮಾತಾಡುತ್ತಿದ್ದಾರೆ. ಅಷ್ಟರಲ್ಲಿ ಗುಡಿಸಲ ಒಳಗಿನಿಂದ ಸಂಗೀತ ಕೇಳಿಸಿತು. ಹೊರಗಿನ ಎಲ್ಲರ ಕಿವಿ ನಿಮಿರಿದವು. ಕೆಲಸ ಮಾಡುತ್ತಿದ್ದವರು ಗಪ್‌ಚಿಪ್, ಗೊಂಬೆಗಳ ಹಾಗೆ, ಕೆಲಸದವರು ಕೈಕಾಲು ಮೈ ಹಾಗೆ ಹಾಗೇ ಬರೆದಂತೆ ನಿಶ್ಚಲ ನಿಂತರು. ಚತುಷ್ಟಯರೂ ಕುತೂಹಲದಿಂದ ಸ್ತಬ್ಧರಾದರು. ಹೋಗಿ ನೋಡೋವೆಂದರೆ ಗುಡಸೀಕರ ಇರೋವಾಗ ತಾವು ಒಳಗೆ ಹೋಗೋದು ಹ್ಯಾಗೆ, ಇದ್ದುದರಲ್ಲಿ ಗುಡಸೀಕರನೊಬ್ಬನಿಗೇ ಅದೇನೆಂದು ಗೊತ್ತಿತ್ತು. ಅಷ್ಟರಲ್ಲಿ ಒಳಗಡೆಯಿಂದ ಚಿಮಣಾ ಬಂದು ಚಾದಂಗಡಿಯ ಬಾಗಿಲಲ್ಲಿ ನಿಂತಳು.
ನಮ್ಮ ಕಥೆಯಲ್ಲಿ ಕಾಲಿಟ್ಟ ಹೊಸ ನಾಯಕಿಯನ್ನು, ಕರಿಮಾಯಿಗೆ ಕೈಮುಗಿದು ಸ್ವಾಗತಿಸೋಣ. ಊರಿನಲ್ಲಿ ಹೊಸ ಗಾಳಿ ಸುಳಿಯಲೆಂದು ಕೂಸುಗಳ ಆರೋಗ್ಯ ಕೆಡದಿರಲೆಂದು, ಹಚ್ಚಿದ ಎಳೆ ದೀಪ ಕಳೆಯದಿರಲೆಂದು ಹಾರೈಸೋಣ.
ಬಂದಳಲ್ಲ, ನೋಡಿದರೆ ಎಂಥ ಅಪರೂಪದ ರೂಪ! ದಟ್ಟವಾಗಿ ಕಾಡಿಗೆ ಹಚ್ಚಿದ ಬಟ್ಟಲಗಣ್ಣು; ಎಸಳು ಮೂಗು, ನಕ್ಕು ನಕ್ಕು ಈಗಷ್ಟೇ ಸುಮ್ಮನಾದ, ಇಲ್ಲವೇ ನಗಲಿದ್ದಾಳೆನಿಸುವಂಥ ತುಟಿಗಳು, ಚೂಪುಗದ್ದ, ಮೇಲೆ ಎಳೆ ಬೆವರಿನಿಂದ ಹಣೆಗಂಟಿದ ಸುರುಳಿ ಸುರುಳಿ ಮುಂಗುರುಳು – ಒಮ್ಮೆ ನೋಡಿದರೆ ಸಾಕು ಕಣ್ಣು ತುಂಬುತ್ತವೆ; ಎದೆ ಕೂಡ. ಸದ್ಯಕ್ಕೆ ಒಂದೇ ಒಂದು ಸಣ್ಣ ಹೋಲಿಕೆಯಿಂದ ಆಕೆಯ ವರ್ಣನೆಯನ್ನು ಮುಗಿಸಬಹುದು; ಬಂಗಾರದ ಮುಖ ಹಾಕಿದಾಗಿನ ಕರುಮಾಯಿಯ ವಿಗ್ರಹ ಇದೆಯಲ್ಲ; – ನೀವು ಭಾವುಕರಾಗಿ ನೋಡಿದರೆ ಚಿಮಣಾ ಹಾಗೆ ಕಾಣಿಸುತ್ತಿದ್ದಳು. ಆದರೆ ಆ ಊರಿನ ಯಾರಿಗೂ ಈ ಹೋಲಿಕೆ ಹೊಳೆಯುವುದು ಸಾಧ್ಯವಿರಲಿಲ್ಲ.
ಚಿಮಣಾಳ ಹಿಂದಿನಿಂದ ಬಸವರಾಜು, ಅವಳೊಂದಿಗೆ ಬಂದಿದ್ದವನು, ಎಡಗೈಯಲ್ಲಿ ಸಣ್ಣ ರೇಡಿಯೋ ಹಿಡಿದುಕೊಂಡು ಹೊರಬಂದ. ಬಣ್ಣಬಣ್ಣದ ಉದ್ದ ತೋಳಿನ ಅಂಗಿ ತೊಟ್ಟಿದ್ದ. ಕೆಳಗೆ ಸೊಂಟದಿಂದ ಅಂಗಾಲಿನ ತನಕ ಇನ್‌ಶರ್ಟ್ ಮಾಡಿ ಪ್ಯಾಂಟು ಹಾಕಿದ್ದ ಪಾದ ಮುಚ್ಚುವ ಹಾಗೆ ಬೂಟು ಹಾಕಿದ್ದ. ಎಡಗೈಯಲ್ಲಿ ರೇಡಿಯೋ ಇತ್ತು. ಬಲಗೈಯಲ್ಲಿ ಸಿಗರೇಟಿತ್ತು. ಸೇದುತ್ತ ಆಗಾಗ ಮೂಗು ಬಾಯಿಗಳಿಂದ ನಾಜೂಕಾಗಿ ಹೊಗೆಬಿಡುತ್ತಿದ್ದ. ಹಾಗೆ ಬಿಟ್ಟಾಗ ಹೊಗೆ ಚಕ್ರಗಳ ಸಣ್ಣ ದೊಡ್ಡ ಸರಪಳಿ ಹೊರಬರುತ್ತಿತ್ತು. ಈಗ ಎಲ್ಲರೂ ತನ್ನನ್ನೇ ನೊಡುತ್ತಿದ್ದಾರೆಂದು ಅವನಿಗೆ ಗೊತ್ತಿತ್ತು. ತಾನು ಎಲ್ಲಿಗೆ ಹೋದರೆ ಅಲ್ಲಿ ಬೆನ್ನುಹತ್ತತ್ತಾರೆಂದು ಅವನಿಗೆ ಗೊತ್ತಿತ್ತು. ಅದಕ್ಕೇ ಆತ ಎದುರಿನ ಗುಡಸೀಕರನನ್ನು ಮಾತಾಡಿಸಲಿಲ್ಲ. ತನ್ನ ಪಾಡಿಗೆ ತಾನು ರೇಡಿಯೋ ಹಾಡು ಕೇಳುತ್ತ ಊರು ನೋಡುವವನಂತೆ ಹೊರಟ. ಅಲ್ಲಿದ್ದವರು ಬೆರಗೋ, ಹುಯ್ಯೋ ಹೋ ಎನ್ನುತ್ತ ವಶೀಕರಣಕ್ಕೆ ಒಳಗಾದವರಂತೆ ಬೆನ್ನಹತ್ತಿದರು.
ಮಂದಿಯ ಕಲ್ಪನೆಗೆ ದೊಡ್ಡ ಆಘಾತವಾಗಿತ್ತು. ಸಣ್ಣ ಪೆಟ್ಟಿಗೆ ಇಷ್ಟು ಚೆನ್ನಾಗಿ ಹಾಡುವುದೆಂದರೇನು ಕೆಲವು, ಪೆಟ್ಟಿಗೆಯಲ್ಲಿ ಕಿರುಬೆರಳ ಗಾತ್ರದ ಜನ ಇದ್ದಾರೆಂದು ಹುಡುಗರು, ಇದೆಲ್ಲ ಯಂತ್ರವೆಂದು ಬಲಿತವರು, ಹೌಂದು, ಮಲೆನಾಡಿನಲ್ಲಿ ಯಂತ್ರ ಮಂತ್ರ ಮಾಡುವವರಿರುತ್ತಾರೆಂದು, ಇದು ಅವರ ಕರಾಮತ್ತು ಎಂದು ಇನ್ನು ಕೆಲವರು, ಇಂಗರೇಜಿಯವರ ಜಾದೂಗಾರಿಕೆಯೆಂದು ತಿಳಿದವರು – ಒಂದೇ ಎರಡೇ ಹತ್ತು ಹೆಜ್ಜೆ ಬೆನ್ನು ಹತ್ತುವುದರೊಳಗೆ ಒಬ್ಬೊಬ್ಬನ ತಲೆಯಲ್ಲಿ ಕನಿಷ್ಠ ಹತ್ತೆಂಟು ಕಲ್ಪನೆ ಹುಟ್ಟಿ ತೇಲಿ ಮುಳುಗತೊಡಗಿದವು. ಎಲ್ಲರ ಕಲ್ಪನೆಗಳು ಏಕದಂ ಕ್ರಿಯಾಶೀಲವಾದವು. ಎಲ್ಲರೂ ಈಗ ಎರಡಾಗಿದ್ದರು: ರೇಡಿಯೋ ಕೇಳಲು ಕಿವಿಯಾದರು, ಬಸವರಾಜನನ್ನು ನೋಡಲು ಕಣ್ಣಾದರು.
ಸನ್ನಿವೇಶದ ಸರಿಯಾದ ಲಾಭ ಪಡೆದವರು ಚತುಷ್ಟಯರು. ಎಷ್ಟೆಂದರೂ ಬಸವರಾಜು ತಾವು ಕರತಂದವಲ್ಲವೆ? ಅವನ ಬಗ್ಗೆ ಎಲ್ಲಿಲ್ಲದ ಅಭಿಮಾನ ಮೂಡಿತು. ಕಳ್ಳ ಒಂದೆರಡು ಸಲ, ಹೋಗುತ್ತಿದ್ದ ಬಸವರಾಜನ ಭುಜದ ಮೇಲೆ ಕೈಹಾಕಲು ನೋಡಿದ. ಅದು ಸಾಧ್ಯವಾಗದ್ದಕ್ಕೆ ತಂತಾನೆ ’ನಮ್ಮ ದೋಸ್ತಿ’ ಎಂದು ಹೇಳಿಕೊಂಡು ನಕ್ಕ. ಜನರ ಅಜ್ಞಾನಕ್ಕೆ ಚತುಷ್ಟಯರಿಗುಂಟಾದ ಮರುಕ ಅಷ್ಟಿಷ್ಟಲ್ಲ. ಏನೇನೋ ಮಾತಾಡಿಕೊಂಡು, ಕಲ್ಪನೆಗಳನ್ನೋಡಿಸಿಕೊಂಡು ಹೋಗುತ್ತಿದ್ದ ಜನರಿಗೆ ಅವರೇ ತಿಳುವಳಿಕೆ ಹೇಳಬೇಕಾಯಿತು. ಗುಡಸೀಕರ ಹಿಂದೆ ಇದನ್ನು ವರ್ಣಿಸಿ ಇದರ ಹೆಸರು ‘ರೇಡವೇ’ ಎಂದು ಹೇಳಿದ್ದನ್ನು ಜ್ಞಾಪಿಸಿಕೊಂಡು ಆ ಜ್ಞಾನವನ್ನು ಎಲ್ಲರಿಗೂ ಅಭಿಮಾನಪೂರ್ವಕ ಹಂಚುತ್ತಿದ್ದರು. ಅಲ್ಲದೆ ಬೆಂಬತ್ತಿದ ಗುಂಪಿನಲ್ಲಿ ಹೆಜ್ಜೆಗೊಬ್ಬೊಬ್ಬ ಹೊಸಬ ಸೇರಿಕೊಳ್ಳುತ್ತಿದ್ದ. ಹೆಜ್ಜೆಗೊಮ್ಮೆಮ್ಮೆ ಹೊಸದಾಗಿ ವಿವರಿಸುತ್ತಿದ್ದರು. ಆಶ್ಚರ್ಯವೆಂದರೆ ಉದರಿಯಲ್ಲದ ಮೆರೆಮಿಂಡ ಈ ದಿನ ಪುಷ್ಕಳ ಉದಾರಿಯಾಗಿಬಿಟ್ಟ. ಗುಂಪಿನ ಇಬ್ಬರಿಗೆ ಸಿಗರೇಟಿನ ತುಂಡು ಕೊಟ್ಟು ಹೊತ್ತಸಿಕೊಳ್ಳಲು ಕಡ್ಡೀಪೆಟ್ಟಿಗೆ ಕೂಡ ಕೊಟ್ಟ.
ಅಕಸ್ಮಾತ್ ಘಟಿಸಿದ ಸಾವಿನ ಸುದ್ದಿಯಷ್ಟೇ ತೀವ್ರವಾಗಿ ಬಸವರಾಜೂನ ‘ರೇಡವೇ’ ಸುದ್ದಿ ಊರಲ್ಲಿ ಹಬ್ಬಿತು. ಹುಡುಗರು, ತರುಣರು, ಮುದುಕರು ಹೀಗೆ ಮೊದಮೊದಲು ಹತ್ತಿಪ್ಪತ್ತಿದ್ದ ಗುಂಪು ಬರುಬರುತ್ತ ನೂರಾರಾಯ್ತು. ಬಸವರಾಜನಿಗೆ ಪ್ರಾರಂಭದಲ್ಲಿ ದಿಗಿಲಾಯಿತಾದರೂ ಮುಂದೆ ವಿಚಿತ್ರ ಖುಷಿಯಾಗತೊಡಗಿತ್ತು. ಸಿಗರೇಟು ಹೆಚ್ಚಗಿಯೇ ಸೇದಿದ. ಇನ್ನಷ್ಟು ಹೊಗೆಚಕ್ರ ಬಿಟ್ಟ. ಅದು ಅದೃಶ್ಯ ಯಂತ್ರವೊಂದರ ಉರುಳುವ ಚಕ್ರಮಾಲೆಯಂತೆ ಕಾಣುತ್ತಿತ್ತು. ಊರು ಸುತ್ತಿ ಗುಡಿಸಲಿಗೆ ಬಂದ. ಅಂತೂ ಹೊಸ ಚಹದಂಗಡಿಯ ನವೀನ ಪ್ರಾರಂಭ ಈ ರೀತಿ ಆಯ್ತು.
ಅದು ಅಡ್ಡವಾರವಾದುದರಿಂದ, ಕರಿಮಾಯಿ ಮೈತುಂಬ ಬೇಕಾಗಿದ್ದಿರಲಿಲ್ಲ. ಆದರೆ ಅ ದಿನ ಸಂಜೆ ಕರಿಮಾಯಿ ಮೈತುಂಬಿದಳು. ಕೂಡಲೇ ಗೌಡನಿಗೆ, ಹಿರಿಯರಿಗೆ ಕರೆಹೋಯಿತು. ಎಲ್ಲ ಬಂದರು. ತಾಯಿ ವಿಚಿತ್ರವಾಗಿ ಬಿಕ್ಕುತ್ತಿದ್ದಳು. ಬಿಕ್ಕುತ್ತ ಸಂಕಟಪಡುತ್ತಿದ್ದಳು. “ತಾಯೀ ಯಾಕ ಅಳಾಪ ಮಾಡತಿ? ಅದೇನೈತಿ ನಿನ್ನ ಮಕ್ಕಳ ಮುಮದ ಹೇಳಬಾರದ?” ಎಂದ ಗೌಡ. ಆದರೂ ತಾಯಿ ಬಾಯಿ ಬಿಡಲಿಲ್ಲ. ಬರೀ ದುಃಖ ಮಾಡಿದಳು. ಬಿಕ್ಕಿದಳು. ಕಣ್ಣೀರು ಸುರಿಸಿದಳು. ಬಾಯಿ ಬರಲೆಂದು ಬಂಡಾರೆಸೆದರು. ಒಂದೆರಡು ಸಾರಿ ಅಳುವ ಮುದಕಿ ಹಾಗೆ ದನಿತೆಗೆದಳು. ಮತ್ತೆ ಕಣ್ಣೀರು ಸುರಿಸಿದಳು, ಬಿಕ್ಕಿದಳು. ಬಾಯಿ ಮಾತ್ರ ಬಿಡಲಿಲ್ಲ. ಗೌಡ ದಿಂಡುರುಳಿ ಕಾಲು ಹಿಡಿದ. ಹಿರಿಯರೂ ಹಿಡಿದರು. ಹರಕೆ ಕೂಡ ಹೊತ್ತರು. ಅಂತೂ “ಹರಿಕಿ ಹೊತ್ತವರ ಹೊತ್ತೀಗಿ ಆಗಾಕಿ” ಎಂಬ ತಾಯಿಯ ವರ್ಣನೆ ಇಂದು ಹುಸಿಯಾಯಿತು.